ಬದಿಯಡ್ಕ: ನೀರ್ಚಾಲಿನಲ್ಲಿ ಕಾರ್ಯಾಚರಿಸುತ್ತಿರುವ ಕಾಸರಗೋಡು ಕೋ ಓಪರೇಟಿವ್ ಸ್ಟೋರ್ಸ್ ನ ನೂತನ ಆಡಳಿತಮಂಡಳಿಗೆ ಸಹಕಾರ ಭಾರತಿಯ ಎಲ್ಲಾ 7 ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
2024-29ರ ಅವಗೆ ಅಧ್ಯಕ್ಷರಾಗಿ ರಾಮಕೃಷ್ಣ ಹೆಬ್ಬಾರ್ ಸೀತಾಂಗೋಳಿ, ಉಪಾಧ್ಯಕ್ಷೆಯಾಗಿ ಜಯಂತಿ ವಾಂತಿಚ್ಚಾಲು ಆಯ್ಕೆಯಾದರು. ಬಾಲಗೋಪಾಲ ಏಣಿಯರ್ಪು, ಬಾಲಸುಬ್ರಹ್ಮಣ್ಯ ಭಟ್ ಮಲ್ಲಡ್ಕ, ವಿಜಯ ರಾಮ, ವಿನೀತ ನೀರ್ಚಾಲು, ರೂಪರೇಖ ಬೇಳ ನೂತನ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದರು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಸಹಕಾರ ಭಾರತಿಯ ನೇತೃತ್ವದಲ್ಲಿ ಅಭಿನಂದನಾ ಸಭೆ ನೀರ್ಚಾಲು ಮಾರ್ಕೆಟಂಗ್ ಸೊಸೈಟಿಯ ಸಭಾಭವನದಲ್ಲಿ ನಡೆಸಲಾಯಿತು. ಸಹಕಾರ ಭಾರತಿಯ ಜಿಲ್ಲಾ ಅಧ್ಯಕ್ಷ ಗಣೇಶ ಪಾರೆಕಟ್ಟೆ ಅಭಿನಂದನಾ ಭಾಷಣ ಮಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪದ್ಮರಾಜ ಪಟ್ಟಾಜೆ, ತಾಲೂಕು ಕಾರ್ಯದರ್ಶಿ ಗಣಪತಿ ಪ್ರಸಾದ ಕುಳಮರ್ವ ಉಪಸ್ಥಿತರಿದ್ದರು.





