ನವದೆಹಲಿ: ದೇಶದಾದ್ಯಂತ ಇಂದು (ಆ.20) ರಾಜೀವ್ ಗಾಂಧಿ ಅವರ 80ನೇ ಜನ್ಮದಿನ ಆಚರಣೆ ಮಾಡಲಾಗುತ್ತಿದೆ.
0
samarasasudhi
ಆಗಸ್ಟ್ 20, 2024
ನವದೆಹಲಿ: ದೇಶದಾದ್ಯಂತ ಇಂದು (ಆ.20) ರಾಜೀವ್ ಗಾಂಧಿ ಅವರ 80ನೇ ಜನ್ಮದಿನ ಆಚರಣೆ ಮಾಡಲಾಗುತ್ತಿದೆ.
ಈ ನಿಮಿತ್ತ ರಾಜೀವ್ ಗಾಂಧಿ ಅವರ ಸ್ಮಾರಕಕ್ಕೆ ತರಳಿ ಹವಾರು ಗಣ್ಯರು ಪುಷ್ಪ ನಮನ ಸಲ್ಲಿಸುತ್ತಿದ್ದಾರೆ.
ರಾಜೀವ್ ಗಾಂಧಿ ಅವರ ಸ್ಮಾರಕ ಇರುವ 'ವೀರಭೂಮಿ'ಗೆ ತೆರಳಿದ ರಾಜೀವ್ ಪುತ್ರ ರಾಹುಲ್ ಗಾಂಧಿ ಪುಷ್ಪ ನಮನ ಸಲ್ಲಿಸಿದರು.
ಸಹಾನುಭೂತಿಯುಳ್ಳ ವ್ಯಕ್ತಿತ್ವ, ಸಾಮರಸ್ಯ ಮತ್ತು ಸದ್ಭಾವನೆಯ ಪ್ರತಿರೂಪ...
ಅಪ್ಪ, ನಿಮ್ಮ ಬೋಧನೆಗಳು ನನಗೆ ಸ್ಫೂರ್ತಿ, ನಿಮ್ಮ ನೆನಪುಗಳೊಂದಿಗೆ ನಾನು ಭಾರತಕ್ಕಾಗಿ ನಿಮ್ಮ ಕನಸುಗಳನ್ನು ನನಸಾಗಲು ಶ್ರಮಿಸುತ್ತೇನೆ ಎಂದು ರಾಹುಲ್ ಗಾಂಧಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.