ನವದೆಹಲಿ: ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಅಧ್ಯಕ್ಷೆ ರೇಖಾ ಶರ್ಮಾ ಅವರ ಅಧಿಕಾರಾವಧಿ ಮಂಗಳವಾರ ಕೊನೆಗೊಂಡಿದೆ. 60 ವರ್ಷದ ಶರ್ಮಾ, 2018ರ ಆಗಸ್ಟ್ 7ರಂದು ಎನ್‌ಸಿಡಬ್ಲ್ಯು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.
0
samarasasudhi
ಆಗಸ್ಟ್ 07, 2024
ನವದೆಹಲಿ: ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಅಧ್ಯಕ್ಷೆ ರೇಖಾ ಶರ್ಮಾ ಅವರ ಅಧಿಕಾರಾವಧಿ ಮಂಗಳವಾರ ಕೊನೆಗೊಂಡಿದೆ. 60 ವರ್ಷದ ಶರ್ಮಾ, 2018ರ ಆಗಸ್ಟ್ 7ರಂದು ಎನ್‌ಸಿಡಬ್ಲ್ಯು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.
'ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ನನ್ನ ಒಂಬತ್ತು ವರ್ಷಗಳ ಅಧಿಕಾರಾವಧಿ ಮಂಗಳವಾರ ಕೊನೆಗೊಂಡಿದೆ.
ಇತ್ತೀಚಿನ ಮಣಿಪುರ ಹಿಂಸಾಚಾರದಲ್ಲೂ ಅವರು ಮಹಿಳೆಯರ ಪರ ಧ್ವನಿ ಎತ್ತಲಿಲ್ಲ ಎನ್ನುವ ಆರೋಪಗಳು ಸೇರಿದಂತೆ ಹಲವು ವಿವಾದಗಳಿಗೂ ಅವರು ಗುರಿಯಾಗಿದ್ದರು.
ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳಲ್ಲಿ ವರದಿಯಾಗುವ ಪ್ರಕರಣಗಳಲ್ಲಿ ಇವರು ಕ್ರಮ ಕೈಗೊಳ್ಳುತ್ತಿರಲಿಲ್ಲ ಎನ್ನುವ ಆಪಾದನೆ ರೇಖಾ ಅವರ ಮೇಲಿತ್ತು. ಆದರೆ, ಈ ಆರೋಪವನ್ನು ಅವರು ಬಲವಾಗಿ ತಳ್ಳಿಹಾಕಿದ್ದಾರೆ.