HEALTH TIPS

ಮನೆ ಮನೆ ಭಜನೆ ಸಮಾರೋಪ

              ಮಧೂರು: ರಾಮಾಯಣ ಮಾಸದ ನಿರಂತರ 31 ದಿನಗಳ ಮನೆಮನೆ ಭಜನೆಯ ಸಮಾರೂಪ ಸಮಾರಂಭ ಉಳಿಯತಡ್ಕದ ಶ್ರೀ ವಾಸುದೇವ ಗಟ್ಟಿ ಮತ್ತು ಯಶೋಧಾ ದಂಪತಿಗಳ ಸ್ವಗೃಹದಲ್ಲಿ ನಡೆಯಿತು. ಕಳೆದ 15 ವರ್ಷಗಳಿಂದ ರಾಮಾಯಣ ಮಾಸದಲ್ಲಿ ನಿರ್ವಹಿಸುತ್ತಾ ಬಂದಿರುವ ಮನೆಮನೆ ಭಜನೆಯ ಪ್ರೇರಕ ಶಕ್ತಿಯು, ಇದಕ್ಕೆ ಕಾರಣಕರ್ತರು ಆಗಿರುವ ಭಜನಾ ಗುರು ಹರಿದಾಸ್ ಜಯಾನಂದ ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮನೆ ಮನೆ ಭಜನೆ ಮಾಡುವುದರ ಹಿಂದಿರುವ ಸದುದ್ದೇಶವನ್ನು ತಿಳಿಸಿಕೊಟ್ಟರು.

             ವಿ.ಹಿಂ.ಪ. ಕಾಸರಗೋಡು ನಗರ ಅಧ್ಯಕ್ಷ ಗುರುಪ್ರಸಾದ್ ಕೋಟೆಕಣೆ ಭಜನೆಗಿರುವ ಶಕ್ತಿಯ ಬಗ್ಗೆ ವಿವರಿಸಿದರು. ಮಾಜಿ ಕೌನ್ಸಿಲರ್ ಶಂಕರ್ ಕೆ, ಮೋಹನ್ ಆಚಾರ್ಯ ಪುಳ್ಕೂರು, ವಾಸುದೇವ ಗಟ್ಟಿ, ಶಿವರಾಂ ಶೆಟ್ಟಿ, ಪದ್ಮನಾಭ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗುರುಗಳ ಹಾಗೂ ಮಕ್ಕಳು, ಮಾತೆಯರ ಭಜನಾ ಸಂಕೀರ್ತನೆ ನಡೆಯಿತು. ರೋಹಿತಾಕ್ಷ ಸ್ವಾಗತಿಸಿ, . ಯಶೋಧ ಗಟ್ಟಿ ವಂದಿಸಿದರು. ಗುರುಗಳ ಪಾದ ಪೂಜೆಯ ಬಳಿಕ ಮಂಗಳಾಚರಣೆ ನಡೆಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries