HEALTH TIPS

ನಾಲಿಗೆಯ ಪೋಟೋ ಹೇಳಲಿದೆಯಂತೆ ಕ್ಯಾನ್ಸರ್, ಮಧುಮೇಹ ಮತ್ತು ಸ್ಟ್ರೋಕ್ ಸೂಚನೆ: ಎ.ಐ. ಪ್ರೋಗ್ರಾಂ ರಚಿಸಿದ ಸಂಶೋಧಕರು

ನಮ್ಮಲ್ಲಿ ಹಿಂದೆ ಒಂದು ಮಾತಿತ್ತು.ನಾಲಿಗೆ ಕುಲವನ್ನು ಹೇಳುತ್ತದೆ ಎಂದು. ಆದರೆ, ಅದೇನೊ…ಹಿಂದಿನ ಕಾಲದ ವೈದ್ಯರಂತೂ ಮೊದಲು ಗಮನಿಸುತ್ತಿದ್ದುದು ನಾಡಿ ಮತ್ತು ನಾಲಿಗೆ. 

ಈಗ ಮಾನವನ ನಾಲಿಗೆಯ ಬಣ್ಣವನ್ನು ನೋಡುವ ಮೂಲಕ ರೋಗಗಳನ್ನು ಪತ್ತೆಹಚ್ಚಲು ಸಂಶೋಧಕರು ಹೊಸ ಕಂಪ್ಯೂಟರ್ ಅಲ್ಗಾರಿದಮ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಮಧುಮೇಹ ಮತ್ತು ಪಾಶ್ರ್ವವಾಯು ಮುಂತಾದ ವಿವಿಧ ಕಾಯಿಲೆಗಳನ್ನು ಶೇಕಡಾ 98 ರಷ್ಟು ನಿಖರವಾಗಿ ವಿಶ್ಲೇಷಿಸುವ ಕಾರ್ಯಕ್ರಮವನ್ನು ಸಿದ್ಧಪಡಿಸಲಾಗಿದೆ.

ಆಸ್ಟ್ರೇಲಿಯಾದ ಮಿಡಲ್ ಟೆಕ್ನಿಕಲ್ ಯೂನಿವರ್ಸಿಟಿ ಮತ್ತು ಸೌತ್ ಆಸ್ಟ್ರೇಲಿಯಾದ ವಿಶ್ವವಿದ್ಯಾನಿಲಯವು ಅಭಿವೃದ್ಧಿಪಡಿಸಿದ ಚಿತ್ರಣ ವ್ಯವಸ್ಥೆಯು ಪಾಶ್ರ್ವವಾಯು, ರಕ್ತಹೀನತೆ, ಮಧುಮೇಹ, ಯಕೃತ್ತು ಮತ್ತು ಪಿತ್ತಕೋಶದ ತೊಂದರೆಗಳು ಮತ್ತು ಜಠರಗರುಳಿನ ಕಾಯಿಲೆಗಳನ್ನು ಪತ್ತೆ ಮಾಡುತ್ತದೆ. ನೀವು ಮಾಡಬೇಕಾಗಿರುವುದು ನಾಲಿಗೆಯ ಪೋಟೋವನ್ನು ಅಪ್‍ಲೋಡ್ ಮಾಡುವುದು ಮಾತ್ರ ಎಂದು ಅಸೋಸಿಯೇಟ್ ಪ್ರೊಫೆÉಸರ್ ಅಲಿ ಅಲ್-ನಾಜಿ ಹೇೀಳಿರುವರು.

ಸಾಮಾನ್ಯವಾಗಿ, ಮಧುಮೇಹ ಹೊಂದಿರುವ ಜನರು ಹಳದಿ ನಾಲಿಗೆಯನ್ನು ಹೊಂದಿರುತ್ತಾರೆ; ಕ್ಯಾನ್ಸರ್ ಪೀಡಿತರು ನೇರಳೆ ಬಣ್ಣ ಮತ್ತು ನಾಲಿಗೆಯ ಮೇಲೆ ವಿಶೇಷವಾದ ಜಿಡ್ಡಿನ ಲೇಪನವನ್ನು ಹೊಂದಿರುತ್ತಾರೆ. ಪಾಶ್ರ್ವವಾಯು ಹೊಂದಿರುವ ಜನರು ಅಸಹಜ ಆಕಾರದ ಕೆಂಪು ನಾಲಿಗೆಯನ್ನು ಹೊಂದಿರಬಹುದು. ಬಿಳಿ ನಾಲಿಗೆ ರಕ್ತಹೀನತೆಯನ್ನು ಸೂಚಿಸುತ್ತದೆ, ಆದರೆ ಇಂಡಿಗೊ ಅಥವಾ ನೇರಳೆ ನಾಲಿಗೆ ನಾಳೀಯ ಅಥವಾ ಜೀರ್ಣಕಾರಿ ಸಮಸ್ಯೆಗಳು ಅಥವಾ ಆಸ್ತಮಾವನ್ನು ಸೂಚಿಸುತ್ತದೆ," ಎಂದು ಅವರು ಹೇಳಿರುವರು.

ಆರೋಗ್ಯ ಸಮಸ್ಯೆಗಳನ್ನು ನಿರ್ಧರಿಸಲು ನಾಲಿಗೆಯ ಬಣ್ಣ, ಆಕಾರ ಮತ್ತು ದಪ್ಪವನ್ನು ಅಧ್ಯಯನ ಮಾಡುವ ಸಾಂಪ್ರದಾಯಿಕ ಚೀನೀ ಅಭ್ಯಾಸವು 2,000 ವರ್ಷಗಳ ಹಿಂದಿನದು. ಅದೇ ತಂತ್ರವನ್ನು ಎ.ಐ.ಮೂಲಕ ಪುನರಾವರ್ತಿಸಲಾಗುತ್ತದೆ ಎಂದು ಅಲ್-ನಾಜಿ ವಿವರಿಸಿರುವರು. ಈ ತಂತ್ರಜ್ಞಾನವನ್ನು ಭವಿಷ್ಯದಲ್ಲಿ ಸ್ಮಾರ್ಟ್ ಪೋನ್ ಗಳಲ್ಲಿ ಬಳಸಬಹುದು ಎಂದು ಸಹ ಸಂಶೋಧಕ ಪ್ರೊಫೆಸರ್ ಜವಾನ್ ಚಾಲ್ ಸಲಹೆ ನೀಡಿದ್ದಾರೆ.



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries