ನವದೆಹಲಿ: ನರೇಂದ್ರ ಮೋದಿ ಅವರು ಸೋಮವಾರ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದು, ತಮ್ಮ ಈಚೆಗಿನ ಉಕ್ರೇನ್ ಭೇಟಿ ಕುರಿತು ವಿವರಿಸಿದ್ದಾರೆ.
0
samarasasudhi
ಆಗಸ್ಟ್ 27, 2024
ನವದೆಹಲಿ: ನರೇಂದ್ರ ಮೋದಿ ಅವರು ಸೋಮವಾರ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದು, ತಮ್ಮ ಈಚೆಗಿನ ಉಕ್ರೇನ್ ಭೇಟಿ ಕುರಿತು ವಿವರಿಸಿದ್ದಾರೆ.
'ಬಾಂಗ್ಲಾದೇಶದ ಪರಿಸ್ಥಿತಿಯ ಬಗ್ಗೆಯೂ ಚರ್ಚಿಸಿದ್ದು, ಅಲ್ಲಿ ಸಹಜ ಸ್ಥಿತಿಯನ್ನು ಶೀಘ್ರವಾಗಿ ಮರುಸ್ಥಾಪಿಸುವ ಅಗತ್ಯದ ಬಗ್ಗೆ ಒತ್ತಿಹೇಳಿದ್ದೇನೆ. ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತರ, ಅದರಲ್ಲೂ ವಿಶೇಷವಾಗಿ ಹಿಂದೂಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳುತ್ತೇವೆ' ಎಂದಿದ್ದಾರೆ.
ದೂರವಾಣಿ ಸಂಭಾಷಣೆ ವೇಳೆ ಮೋದಿ ಅವರು ತಮ್ಮ ಉಕ್ರೇನ್ ಭೇಟಿಯ ಕುರಿತ ವಿವರಗಳನ್ನು ಬೈಡನ್ ಅವರಿಗೆ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
'ಕ್ವಾಡ್' ಒಳಗೊಂಡಂತೆ ವಿವಿಧ ಶೃಂಗಗಳಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಭಾರತ-ಅಮೆರಿಕ ಸಹಭಾಗಿತ್ವವು ಉಭಯ ದೇಶಗಳ ಜನರು ಹಾಗೂ ಇಡೀ ವಿಶ್ವಕ್ಕೆ ಪ್ರಯೋಜನ ನೀಡುವ ಗುರಿಯನ್ನು ಹೊಂದಿದೆ ಎಂಬುದನ್ನು ಮೋದಿ ಹಾಗೂ ಬೈಡನ್ ಒತ್ತಿ ಹೇಳಿದ್ದಾರೆ' ಎಂದು ಪ್ರಕಟಣೆ ವಿವರಿಸಿದೆ.