ಸಿಡ್ನಿ: ಉತ್ತರ ಆಸ್ಟ್ರೇಲಿಯಾದ ಜನಪ್ರಿಯ ಪ್ರವಾಸಿ ತಾಣವಾದ ಕೈರ್ನ್ಸ್‌ನಲ್ಲಿ ಹೆಲಿಕಾಪ್ಟರ್‌ವೊಂದು ಹೋಟೆಲ್‌ನ ಮೇಲ್ಛಾವಣಿಗೆ ಅಪ್ಪಳಿಸಿದ್ದು, ಪೈಲಟ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
0
samarasasudhi
ಆಗಸ್ಟ್ 12, 2024
ಸಿಡ್ನಿ: ಉತ್ತರ ಆಸ್ಟ್ರೇಲಿಯಾದ ಜನಪ್ರಿಯ ಪ್ರವಾಸಿ ತಾಣವಾದ ಕೈರ್ನ್ಸ್‌ನಲ್ಲಿ ಹೆಲಿಕಾಪ್ಟರ್‌ವೊಂದು ಹೋಟೆಲ್‌ನ ಮೇಲ್ಛಾವಣಿಗೆ ಅಪ್ಪಳಿಸಿದ್ದು, ಪೈಲಟ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್‌ನ ಪ್ರಮುಖ ಗೇಟ್‌ವೇಯಾದ ಕೈರ್ನ್ಸ್ ನಗರದ ಹಿಲ್ಟನ್‌ನ ಡಬಲ್ ಟ್ರೀ ಹೋಟೆಲ್‌ನಲ್ಲಿ ಅಪಘಾತ ಸಂಭವಿಸಿದೆ ಎಂದು ಆಸ್ಟ್ರೇಲಿಯಾದ ಮಾಧ್ಯಮ ವರದಿ ಮಾಡಿದೆ.
'ಭಾನುವಾರ ತಡರಾತ್ರಿ 2 ಗಂಟೆ ಸುಮಾರಿಗೆ ಡಬಲ್ ಎಂಜಿನ್ ಹೆಲಿಕಾಪ್ಟರ್ ಹೋಟೆಲ್ ಮೇಲ್ಛಾವಣಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಬೆಂಕಿ ಹೊತ್ತುಕೊಂಡಿದ್ದು, ತಕ್ಷಣ ಹೋಟೆಲ್‌ನಲ್ಲಿದ್ದ ನೂರಾರು ಅತಿಥಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು ಎಂದು ಕ್ವೀನ್ಸ್‌ಲ್ಯಾಂಡ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಹೋಟೆಲ್‌ನಲ್ಲಿದ್ದ ಜನರು ಸುರಕ್ಷಿತವಾಗಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದ್ದು, ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.