ನವದೆಹಲಿ: ವಿವಿಧ ಕೇಡರ್‌ಗಳಲ್ಲಿ ಇರುವ ಸಿಬ್ಬಂದಿ ಉನ್ನತ ವಿದ್ಯಾರ್ಹತೆ ಪಡೆದುಕೊಳ್ಳುವ ಮೂಲಕ ಒಂದೇ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
0
samarasasudhi
ಆಗಸ್ಟ್ 24, 2024
ನವದೆಹಲಿ: ವಿವಿಧ ಕೇಡರ್‌ಗಳಲ್ಲಿ ಇರುವ ಸಿಬ್ಬಂದಿ ಉನ್ನತ ವಿದ್ಯಾರ್ಹತೆ ಪಡೆದುಕೊಳ್ಳುವ ಮೂಲಕ ಒಂದೇ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ವಿಜ್ಞಾನಿಗಳಿಗಿರುವ 1999ರ ಯೋಜನೆಯ ಲಾಭವನ್ನು ತಾಂತ್ರಿಕ ಸಿಬ್ಬಂದಿಗೂ ವಿಸ್ತರಿಸಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ನೀಡಿದ್ದ ಆದೇಶವನ್ನು ಎತ್ತಿಹಿಡಿದಿದ್ದ ದೆಹಲಿ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಜಿ.ಕೆ.ಮಾಹೇಶ್ವರಿ ಮತ್ತು ರಾಜೇಶ್ ಬಿಂದಾಲ್ ಅವರ ಪೀಠ ಅನೂರ್ಜಿತಗೊಳಿಸಿದೆ.