ಮಾಸ್ಕೊ: ರಷ್ಯಾದ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿ ಉಕ್ರೇನ್ ಸೇನೆಯು ಡ್ರೋನ್ ದಾಳಿ ನಡೆಸಿದೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.
0
samarasasudhi
ಆಗಸ್ಟ್ 04, 2024
ಮಾಸ್ಕೊ: ರಷ್ಯಾದ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿ ಉಕ್ರೇನ್ ಸೇನೆಯು ಡ್ರೋನ್ ದಾಳಿ ನಡೆಸಿದೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾದ ಸೇನೆಯು ಪ್ರತಿದಾಳಿ ನಡೆಸಿ ಸುಮಾರು 75 ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ರೊಸ್ತೊವ್ ವಲಯದಲ್ಲಿಯೇ ಸುಮಾರು 36 ಡ್ರೋನ್ ಹೊಡೆದುರುಳಿಸಲಾಗಿದೆ. ಈ ವಲಯದಲ್ಲಿ ಒಟ್ಟು 55 ಡ್ರೋನ್‌ಗಳನ್ನು ಪ್ರಯೋಗಿಸಲಾಗಿತ್ತು ಎಂದು ತಿಳಿಸಿದೆ.
ಉಕ್ರೇನ್‌ನ ಅಧಿಕಾರಿಗಳು, ರಷ್ಯಾದ ಮೊರೊಜೊವಸ್ಕ್‌ನಲ್ಲಿ ಇರುವ ಸೇನಾ ನೆಲೆ ಮತ್ತು ಶಸ್ತ್ರಾಸ್ತ್ರ ಅಡಗಿಸಿಟ್ಟಿದ್ದ ತಾಣವನ್ನು ಗುರಿಯಾಗಿಸಿ ತನ್ನ ಸೇನೆಯು ದಾಳಿ ನಡೆಸಿದೆ ಎಂದು ತಿಳಿಸಿದೆ.
ಒರಿಯೊಲ್ ವಲಯದಲ್ಲಿ ವಸತಿ ಸಂಕೀರ್ಣವನ್ನು ಗುರಿಯಾಗಿಸಿ ಎರಡು ಡ್ರೋನ್ ದಾಳಿ ನಡೆದಿದ್ದು, ಬೆಂಕಿ ಹೊತ್ತಿಕೊಂಡಿತ್ತು ಎಂದು ಅಲ್ಲಿನ ಗವರ್ನರ್ ಆಂಡ್ರೆ ಲಿಚ್‌ಕೊವ್ ತಿಳಿಸಿದ್ದಾರೆ.