ನವದೆಹಲಿ: ತೀವ್ರ ಬರಪೀಡಿತ ಮಲಾವಿಗೆ ಮಾನವೀಯ ನೆರವಿನ ಭಾಗವಾಗಿ ಭಾರತವು 1,000 ಮೆಟ್ರಿಕ್ ಟನ್ ಅಕ್ಕಿಯನ್ನು ರವಾನಿಸಿದೆ ಎಂದು ವರದಿಯಾಗಿದೆ.
0
samarasasudhi
ಸೆಪ್ಟೆಂಬರ್ 08, 2024
ನವದೆಹಲಿ: ತೀವ್ರ ಬರಪೀಡಿತ ಮಲಾವಿಗೆ ಮಾನವೀಯ ನೆರವಿನ ಭಾಗವಾಗಿ ಭಾರತವು 1,000 ಮೆಟ್ರಿಕ್ ಟನ್ ಅಕ್ಕಿಯನ್ನು ರವಾನಿಸಿದೆ ಎಂದು ವರದಿಯಾಗಿದೆ.
'ಭಾರತವು ಮಾನವೀಯ ನೆರವು ಒದಗಿಸುವ ಮೂಲಕ ಮಲಾವಿಯ ಜನರೊಂದಿಗೆ ಒಗ್ಗಟ್ಟಿನಿಂದ ನಿಲ್ಲುವ ಸಂದೇಶವನ್ನು ರವಾನಿಸಿದೆ. ಎಲ್ ನಿನೊ ವಿದ್ಯಮಾನದಿಂದ ಉಂಟಾದ ಭೀಕರ ಬರಗಾಲದ ಪರಿಣಾಮಗಳನ್ನು ಪರಿಹರಿಸಲು 1,000 ಮೆಟ್ರಿಕ್ ಟನ್ ಅಕ್ಕಿ ಸೇರಿದಂತೆ ಇತರೆ ಅಗತ್ಯ ವಸ್ತುಗಳನ್ನು ಇಂದು ಮಲಾವಿಗೆ ತಲುಪಿಸಲಾಗುವುದು' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ 'ಎಕ್ಸ್'ನಲ್ಲಿ ಮಾಹಿತಿ ನೀಡಿದ್ದಾರೆ.
ಮಲಾವಿಯ 28 ಜಿಲ್ಲೆಗಳ ಪೈಕಿ 23 ಜಿಲ್ಲೆಗಳು ತೀವ್ರ ಬರಪೀಡಿತ ಎಂದು ಮಾರ್ಚ್‌ನಲ್ಲಿ ಸರ್ಕಾರ ಘೋಷಿಸಿತ್ತು. ಶುಷ್ಕ ಹವಾಮಾನವು ಮಲಾವಿಯಲ್ಲಿ ಆಹಾರ ಪೂರೈಕೆಯನ್ನು ತೀವ್ರವಾಗಿ ಕುಂಠಿತಗೊಳಿಸಿದೆ.