ನವದೆಹಲಿ: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಚೀನಾ ವಿರುದ್ಧ 1-0 ಅಂತರದ ಗೋಲುಗಳಿಂದ ಗೆಲವು ಸಾಧಿಸುವ ಮೂಲಕ ಭಾರತ ಚಾಂಪಿಯನ್ ಪಟ್ಟ ಉಳಿಸಿಕೊಂಡಿದೆ.
ಚಾಂಪಿಯನ್ಸ್ ಟ್ರೋಫಿಯ 13 ವರ್ಷಗಳ ಇತಿಹಾಸದಲ್ಲಿ ಇದು ಭಾರತಕ್ಕೆ 5ನೇ ಪ್ರಶಸ್ತಿಯಾಗಿದೆ.
0
samarasasudhi
ಸೆಪ್ಟೆಂಬರ್ 18, 2024
ನವದೆಹಲಿ: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಚೀನಾ ವಿರುದ್ಧ 1-0 ಅಂತರದ ಗೋಲುಗಳಿಂದ ಗೆಲವು ಸಾಧಿಸುವ ಮೂಲಕ ಭಾರತ ಚಾಂಪಿಯನ್ ಪಟ್ಟ ಉಳಿಸಿಕೊಂಡಿದೆ.
ಚಾಂಪಿಯನ್ಸ್ ಟ್ರೋಫಿಯ 13 ವರ್ಷಗಳ ಇತಿಹಾಸದಲ್ಲಿ ಇದು ಭಾರತಕ್ಕೆ 5ನೇ ಪ್ರಶಸ್ತಿಯಾಗಿದೆ.
ಅಜೇಯವಾಗಿ ಫೈನಲ್ ಪ್ರವೇಶಿಸಿದ್ದ ಭಾರತಕ್ಕೆ ಚೀನಾ ಭಾರೀ ಪೈಪೋಟಿ ನೀಡಿತ್ತು. ಎರಡೂ ತಂಡಗಳು ಜಿದ್ದಿಗೆ ಬಿದ್ದಂತೆ ಆಡಿದ್ದವು. ಮೊದಲ ಮೂರು ಕ್ವಾರ್ಟರ್ ನಲ್ಲಿ ಇತ್ತಂಡಗಳಿಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ನಾಲ್ಕನೇ ಕ್ವಾರ್ಟರ್ನಲ್ಲಿ ಗೋಲು ದಾಖಲಿಸುವಲ್ಲಿ ಯಶಸ್ವಿಯಾದ ಭಾರತ ತನ್ನ ಚಾಂಪಿಯನ್ ಪಟ್ಟವನ್ನು ಹಾಗೆಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಈ ಮುನ್ನಡೆಯನ್ನು ಕಾಯ್ದುಕೊಂಡ ಭಾರತ ಕೊನೆಗೆ ಗೆಲುವಿನ ನಗೆ ಬೀರಿತು. ಹಲವು ಬಾರಿ ಚೀನಾ ಆಟಗಾರರು ಪ್ರಯತ್ನ ಪಟ್ಟರೂ ಗೋಲು ಹೊಡೆಯಲು ಭಾರತದ ಆಟಗಾರರು ಬಿಡಲಿಲ್ಲ. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತ ಮತ್ತು ಚೀನಾ ತಮ್ಮ ಪರಸ್ಪರ ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು 3-0 ಅಂತರದಿಂದ ಭಾರತ ಗೆದ್ದುಕೊಂಡಿತ್ತು.
ಸೋಮವಾರ ಸೆಮಿಫೈನಲ್ಲಿ ಭಾರತ ತಂಡವು ದಕ್ಷಿಣ ಕೊರಿಯಾ ವಿರುದ್ಧ 4-1 ಗೋಲುಗಳ ಅಂತರದಿಂದ ಜಯ ಸಾಧಿಸಿತ್ತು. ಚೀನಾವು ಮೊದಲ ಸೆಮಿಫೈನಲ್ಲಿ ಪಾಕ್ಗೆ ಅಘಾತ ನೀಡಿ ಫೈನಲ್ ಪ್ರವೇಶಿಸಿತ್ತು.