ಮಧೂರು: ಮಧುಮೇಹ ಕಾಯಿಲೆಯಿಂದ ಎಡಕಾಲಿನ ಗಾಯದಿಂದಾಗಿ ಸುಮಾರು ಎರಡು ವರ್ಷದಿಂದ ನಡೆಯಲಾಗದೆ ಬಳಲುತ್ತಿರುವ ಮಧೂರು ಕೊಲ್ಯ ನಿವಾಸಿ ಶೇಖರ ಗಟ್ಟಿ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜನಮಂಗಳ ಕಾರ್ಯಕ್ರಮದನ್ವಯ ಗಾಲಿ ಕುರ್ಚಿ ಹಸ್ತಾಂತರಿಸಲಾಯಿತು.
ಪ್ರಸಕ್ತ ಶೇಖರ್ ಗಟ್ಟಿ ಅವರು ಪತ್ನಿ ಸುರೇಖ ಹಾಗೂ ಇಬ್ಬರು ಹೆಣ್ಣು ಮಕ್ಕಳ ಜತೆ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸುರೇಖ ಅವರು ಗಜಾನನ ಸ್ವ ಸಹಾಯ ಸಂಘದ ಸದಸ್ಯೆಯಾಗಿರುತ್ತಾರೆ. ಕಾಸರಗೋಡು ತಾಲೂಕು ಯೋಜನಾಧಿಕಾರಿ ಮುಖೇಶ್, ಕೇಂದ್ರ ಒಕ್ಕೂಟ ಅಧ್ಯಕ್ಷ ಜ್ಞಾನೇಶ್ವರ ಆಚಾರ್ಯ ಪರಕ್ಕಿಲ, ಮಧೂರು ಒಕ್ಕೂಟದ ಉಪಾಧ್ಯಕ್ಷ ನಾರಾಯಣ ನಾಯ್ಕ ಬೈನಡ್ಕ , ವಲಯದ ಮೇಲ್ವಿಚಾರಕಿ ಶ್ರೀಮತಿ, ಸೇವಾಪ್ರತಿನಿಧಿ ವಿನಯ ಉಪಸ್ಥಿತರಿದ್ದರು.





