HEALTH TIPS

ಯಾವುದೇ ಬ್ಯಾಂಕ್‌ನಿಂದ ಪಿಂಚಣಿ ಪಡೆಯಲು ಅವಕಾಶ: ಕೇಂದ್ರ ಸರ್ಕಾರ ಆದೇಶ

 ವದೆಹಲಿ: ಇಪಿಎಸ್ ಪಿಂಚಣಿದಾರರಿಗೆ ಮುಂದಿನ ವರ್ಷದ ಜನವರಿ 1ರಿಂದ ದೇಶದ ಯಾವುದೇ ಭಾಗದಲ್ಲಿ, ಯಾವುದೇ ಬ್ಯಾಂಕ್‌ ಮತ್ತು ಯಾವುದೇ ಶಾಖೆಯಿಂದಾದರೂ ತಮ್ಮ ಪಿಂಚಣಿ ಪಡೆಯಲು ಅವಕಾಶ ದೊರೆಯಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್‌ ಮಾಂಡವಿಯಾ ತಿಳಿಸಿದ್ದಾರೆ.

ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆಯ (ಸಿಪಿಪಿಎಸ್‌) ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು, ಅದರಿಂದ ಈ ಸೌಲಭ್ಯ ದೊರೆಯಲಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರದ ಈ ನಿರ್ಧಾರದಿಂದ ಸುಮಾರು 78 ಲಕ್ಷ ಇಪಿಎಸ್‌ ಪಿಂಚಣಿದಾರರಿಗೆ ಉಪಯುಕ್ತವಾಗಲಿದೆ ಎಂದು ಮಾಹಿತಿ ನೀಡಿದ ಅವರು, ಮುಂದಿನ ಹಂತದಲ್ಲಿ ಅದನ್ನು ಆಧಾರ್‌ ಆಧಾರಿತ ಪಾವತಿ ವ್ಯವಸ್ಥೆಗೆ (ಎಬಿಪಿಎಸ್‌) ಪರಿವರ್ತಿಸಲು ಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಿಪಿಪಿಎಫ್‌ನ ಅನುಮೋದನೆಯು ಇಪಿಎಫ್‌ಒ ಆಧುನೀಕರಣದಲ್ಲಿ ಮಹತ್ವದ ಮೈಲಿಗಲ್ಲಾಗುತ್ತದೆ. ಈ ಮೂಲಕ ಪಿಂಚಣಿದಾರರು ಎದುರಿಸುತ್ತಿರುವ ದೀರ್ಘಕಾಲೀನ ಸವಾಲುಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಅಲ್ಲದೆ ತಡೆರಹಿತ ಪಾವತಿಯೂ ಇದರಿಂದ ಸಾಧ್ಯವಾಗುತ್ತದೆ ಎಂದಿದ್ದಾರೆ.

ಪಿಂಚಣಿದಾರರು ಒಂದೆಡೆಯಿಂದ ಮತ್ತೊಂದೆಡೆಗೆ ಸ್ಥಳಾಂತರವಾದಾಗ ಪಿಂಚಣಿ ಪಾವತಿ ಆದೇಶವನ್ನು (ಪಿಪಿಒ) ಒಂದು ಕಚೇರಿಯಿಂದ ಇನ್ನೊಂದಕ್ಕೆ ಸ್ಥಳಾಂತರಿಸುವ ಅಗತ್ಯವಿಲ್ಲ. ಬ್ಯಾಂಕ್‌ ಅಥವಾ ಶಾಖೆಯನ್ನು ಬದಲಿಸುವ ಅಗತ್ಯವೂ ಇರುವುದಿಲ್ಲ. ದೇಶದಾದ್ಯಂತ ಪಿಂಚಣಿ ವಿತರಣೆಯನ್ನು ಸಿಪಿಪಿಎಸ್‌ ಖಚಿತಪಡಿಸುತ್ತದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಪಿಂಚಣಿ ಅರಂಭದ ಸಂದರ್ಭದಲ್ಲಿ, ಪಿಂಚಣಿದಾರರು ಪರಿಶೀಲನೆಗಾಗಿ ಯಾವುದೇ ಶಾಖೆಗೆ ಭೇಟಿ ನೀಡುವ ಅಗತ್ಯವಿಲ್ಲ. ಪಿಂಚಣಿ ಬಿಡುಗಡೆಯಾದ ಕೂಡಲೇ ಅದು ಜಮೆ ಆಗುತ್ತದೆ ಎಂದು ಅದು ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries