ನವದೆಹಲಿ: ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮತ್ತು ಆಕೆಯ ಕೊಲೆ ಪ್ರಕರಣದ ಆರೋಪಿಗಳಲ್ಲೊಬ್ಬರಾದ ಸಂಜಯ್ ರಾಯ್ ಬಟ್ಟೆಗಳನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ವಿಳಂಬ ಮಾಡಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
0
samarasasudhi
ಸೆಪ್ಟೆಂಬರ್ 19, 2024
ನವದೆಹಲಿ: ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮತ್ತು ಆಕೆಯ ಕೊಲೆ ಪ್ರಕರಣದ ಆರೋಪಿಗಳಲ್ಲೊಬ್ಬರಾದ ಸಂಜಯ್ ರಾಯ್ ಬಟ್ಟೆಗಳನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ವಿಳಂಬ ಮಾಡಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ಈ ಅಪರಾಧ ನಡೆದ ಮಾರನೇ ದಿನವಾದ ಆಗಸ್ಟ್ 10ರಂದೇ, ಕೃತ್ಯದಲ್ಲಿ ರಾಯ್ ಪಾತ್ರವಿರುವುದು ಕಂಡುಬಂದಿತ್ತು.
ಘಟನೆ ನಡೆದ ದಿನ ಬೆಳಗಿನ ಜಾವ 4.30ಕ್ಕೆ, ರಾಯ್ ಕಾಲೇಜಿನ ಸೆಮಿನಾರ್ ಹಾಲ್ ಪ್ರವೇಶಿಸುತ್ತಿರುವುದು ಸಿ.ಸಿ. ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರ ಆಧಾರದಲ್ಲಿ ಅವರನ್ನು ಬಂಧಿಸಲಾಗಿದೆ.
'ಈ ಅಪರಾಧ ಕೃತ್ಯ ಎಸಗುವಲ್ಲಿ ರಾಯ್ ಪಾತ್ರ ಇತ್ತು ಎಂಬುದು ಈಗಾಗಲೇ ಕಂಡುಬಂದಿದೆ. ಆದರೆ, ಆತನಿಗೆ ಸೇರಿದ ವಸ್ತುಗಳು ಹಾಗೂ ಆತನ ಬಟ್ಟೆಗಳನ್ನು ಜಪ್ತಿ ಮಾಡಲು ತಾಲಾ ಪೊಲೀಸ್ ಠಾಣೆ ಅಧಿಕಾರಿಗಳು ಅನಗತ್ಯವಾಗಿ ಎರಡು ದಿನ ತಡ ಮಾಡಿದ್ದಾರೆ. ವಿಳಂಬ ಮಾಡಿರದಿದ್ದಲ್ಲಿ, ರಾಯ್ ವಿರುದ್ಧ ಪ್ರಬಲ ಸಾಕ್ಷ್ಯ ಲಭಿಸಿದಂತಾಗುತ್ತಿತ್ತು' ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.
ಆರೋಪಿ ಸಂಜಯ್ ರಾಯ್, ಬಂಧನಕ್ಕೆ ಒಳಗಾಗಿರುವ, ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ತಾಲಾ ಪೊಲೀಸ್ ಠಾಣೆ ಅಧಿಕಾರಿ ಅಭಿಜಿತ್ ಮಂಡಲ್ ಅವರ ನಡುವೆ ಇದ್ದಿರಬಹುದಾದ ಕ್ರಿಮಿನಲ್ ಸಂಚು ಕುರಿತು ಸಿಬಿಐ ತನಿಖೆ ನಡೆಸುತ್ತಿದೆ.
ಕಲ್ಕತ್ತ ಹೈಕೋರ್ಟ್ ಆದೇಶದಂತೆ, ಪ್ರಕರಣ ಕುರಿತ ತನಿಖೆಯನ್ನು ಸಿಬಿಐ ಆಗಸ್ಟ್ 14ರಂದು ಕೈಗೆತ್ತಿಕೊಂಡಿದೆ. ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ತಾಲಾ ಠಾಣೆ ಪೊಲೀಸ್ ಅಧಿಕಾರಿ ಅಭಿಜಿತ್ ಮಂಡಲ್ ಅವರನ್ನು ಬಂಧಿಸಿದೆ.