ಮಥುರಾ: ಮಥುರಾ ಬಳಿಯ ಪಾರ್ಖಮ್ ಗ್ರಾಮದಲ್ಲಿ ಅ.25 ಹಾಗೂ 26ರಂದು ಆರ್‌ಎಸ್‌ಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಸಭೆಯಲ್ಲಿ ಸರಸಂಘಚಾಲಕ ಮೋಹನ್ ಭಾಗವತ್ ಭಾಗವಹಿಸಲಿದ್ದಾರೆ.
0
samarasasudhi
ಅಕ್ಟೋಬರ್ 19, 2024
ಮಥುರಾ: ಮಥುರಾ ಬಳಿಯ ಪಾರ್ಖಮ್ ಗ್ರಾಮದಲ್ಲಿ ಅ.25 ಹಾಗೂ 26ರಂದು ಆರ್‌ಎಸ್‌ಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಸಭೆಯಲ್ಲಿ ಸರಸಂಘಚಾಲಕ ಮೋಹನ್ ಭಾಗವತ್ ಭಾಗವಹಿಸಲಿದ್ದಾರೆ.
ಭಾಗವತ್ ಅವರು ಅ.25 ಹಾಗೂ 26ರಂದು ನಡೆಯುವ ಕಾರ್ಯಕಾರಿಣಿ ಸಮಿತಿ ಸಭೆ ಸೇರಿದಂತೆ ಇನ್ನಿತರೆ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.
ಸಭೆಯು ಮಥುರಾದ ದೀನ್‌ದಯಾಳ್ ಗೋವು ವಿಜ್ಞಾನ ಸಂಶೋಧನಾ ಮತ್ತು ತರಬೇತಿ ಕೇಂದ್ರದಲ್ಲಿ ನಡೆಯಲಿದ್ದು, ಭಾಗವತ್ ಅವರು 10 ದಿನ ಇಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಆರ್‌ಎಸ್‌ಎಸ್‌ನ 46 ಪ್ರಾಂತ ಘಟಕಗಳ ಕಾರ್ಯದರ್ಶಿಗಳು ಹಾಗೂ ಪ್ರಚಾರಕರು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಭದ್ರತೆ ದೃಷ್ಟಿಯಿಂದ ಸಭೆ ನಡೆಯುವ ಸ್ಥಳವನ್ನು ಅಧಿಕಾರಿಗಳು ಪರಿಶೀಲಿಸಿದರು.