ನವದೆಹಲಿ: ಮುಂದಿನ (38ನೇ ಆವೃತ್ತಿಯ) ರಾಷ್ಟ್ರೀಯ ಕ್ರೀಡೆಗಳು ಉತ್ತರಾಖಂಡದಲ್ಲಿ ಜನವರಿ 28 ರಿಂದ ಫೆಬ್ರುವರಿ 14ರವರೆಗೆ ನಡೆಯಲಿವೆ ಎಂದು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಬುಧವಾರ ಪ್ರಕಟಿಸಿದೆ.
0
samarasasudhi
ಅಕ್ಟೋಬರ್ 10, 2024
ನವದೆಹಲಿ: ಮುಂದಿನ (38ನೇ ಆವೃತ್ತಿಯ) ರಾಷ್ಟ್ರೀಯ ಕ್ರೀಡೆಗಳು ಉತ್ತರಾಖಂಡದಲ್ಲಿ ಜನವರಿ 28 ರಿಂದ ಫೆಬ್ರುವರಿ 14ರವರೆಗೆ ನಡೆಯಲಿವೆ ಎಂದು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಬುಧವಾರ ಪ್ರಕಟಿಸಿದೆ.
ವೇಳಾಪಟ್ಟಿಯು ಮುಂದಿನ ತಿಂಗಳ ಸಾಮಾನ್ಯಸಭೆಯಲ್ಲಿ ಸ್ಥಿರೀಕರಣ ಪಡೆಯಬೇಕಾಗಿದೆ ಎಂದು ಐಒಎ ಹೇಳಿದೆ.
'ರಾಷ್ಟ್ರೀಯ ಕ್ರೀಡೆಗಳನ್ನು ಉತ್ತರಾಖಂಡದಲ್ಲಿ ನಡೆಸಲು ಸಂತಸವಾಗುತ್ತಿದೆ. ಈ ರಾಜ್ಯವು ಈ ಪ್ರತಿಷ್ಠಿತ ಕ್ರೀಡೆಗಳ ಆತಿಥ್ಯ ವಹಿಸಲು ಉತ್ಸಾಹ ಮತ್ತು ಬದ್ಧತೆಯನ್ನು ತೋರಿಸಿದೆ' ಎಂದು ಐಒಎ ಅಧ್ಯಕ್ಷೆ ಪಿ.ಟಿ.ಉಷಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದರ ಜೊತೆಗೆ ಉತ್ತರಾಖಂಡವು, ರಾಷ್ಟ್ರೀಯ ಚಳಿಗಾಲದ ಕ್ರೀಡೆಗಳನ್ನು ನಡೆಸಲೂ ಆಸಕ್ತಿ ತೋರಿದೆ. ಈ ಬಗ್ಗೆ ಆ ರಾಜ್ಯದಿಂದ ಖಚಿತವಾದ ಪ್ರಸ್ತಾವ ಸ್ವೀಕರಿಸಲು ಕಾತರಳಾಗಿರುವುದಾಗಿ ಉಷಾ ತಿಳಿಸಿದ್ದಾರೆ.
ಕಳೆದ ಬಾರಿಯ ರಾಷ್ಟ್ರೀಯ ಕ್ರೀಡೆಗಳು ಗೋವಾದಲ್ಲಿ 2023ರ ಅಕ್ಟೋಬರ್ 25 ರಿಂದ ನವೆಂಬರ್ 9ರವರೆಗೆ ನಡೆದಿದ್ದವು. ಮಹಾರಾಷ್ಟ್ರ 80 ಚಿನ್ನ ಸೇರಿದಂತೆ 228 ಪದಕಗಳನ್ನು ಗೆದ್ದು ಪಾರಮ್ಯ ಮೆರೆದಿತ್ತು.