ನವದೆಹಲಿ: ಪ್ರಕಾಶನ ಸಂಸ್ಥೆಯೊಂದನ್ನು ನಡೆಸುತ್ತಿರುವ ಕುಟುಂಬವೊಂದರ ಯುವಕ ಸೇರಿದಂತೆ ನಾಲ್ವರನ್ನು ಬಂಧಿಸಿರುವ ದೆಹಲಿ ಪೊಲೀಸರು, ₹5,620 ಕೋಟಿ ಮೌಲ್ಯದ 562 ಕೆ.ಜಿ ಕೊಕೇನ್ ಹಾಗೂ 40 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
0
samarasasudhi
ಅಕ್ಟೋಬರ್ 03, 2024
ನವದೆಹಲಿ: ಪ್ರಕಾಶನ ಸಂಸ್ಥೆಯೊಂದನ್ನು ನಡೆಸುತ್ತಿರುವ ಕುಟುಂಬವೊಂದರ ಯುವಕ ಸೇರಿದಂತೆ ನಾಲ್ವರನ್ನು ಬಂಧಿಸಿರುವ ದೆಹಲಿ ಪೊಲೀಸರು, ₹5,620 ಕೋಟಿ ಮೌಲ್ಯದ 562 ಕೆ.ಜಿ ಕೊಕೇನ್ ಹಾಗೂ 40 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ತುಷಾರ್ ಗೋಯಲ್, ಹಿಮಾಂಶು, ಔರಂಗಜೇಬ್ ಮತ್ತು ಭರತ್ ಜೈನ್ ಬಂಧಿತರು.
ನೈಋತ್ಯ ದೆಹಲಿಯ ಮಹಿಪಾಲ್ಪುರ ಬಡಾವಣೆಯಲ್ಲಿ ದೆಹಲಿ ಪೊಲೀಸರ ವಿಶೇಷ ಘಟಕವು ಆರೋಪಿಗಳನ್ನು ಮಂಗಳವಾರ ಬಂಧಿಸಿದೆ ಎಂದು ಹೆಚ್ಚುವರಿ ಆಯುಕ್ತ (ವಿಶೇಷ ಘಟಕ) ಪ್ರಮೋದ್ ಸಿಂಗ್ ಕುಶ್ವಾಹ ಸುದ್ದಿಗಾರರಿಗೆ ಬುಧವಾರ ತಿಳಿಸಿದರು.
ಬಂಧಿತ ಗೋಯಲ್, ಶ್ರೀಮಂತ ಉದ್ಯಮಿಯ ಕುಟುಂಬಕ್ಕೆ ಸೇರಿದವರು. ಔರಂಗಜೇಬ್ ಈತನ ಕಾರು ಚಾಲಕ. ಹಿಮಾಂಶು ನಿಕಟ ಸಹವರ್ತಿ. ಕೊಕೇನ್ ರಸ್ತೆ ಮೂಲಕ ತಲುಪಿದ್ದರೆ, ಗಾಂಜಾ ವಿಮಾನದ ಮೂಲಕ ತಲುಪಿದೆ. ಈ ಪ್ರಕರಣದ ಸಂಪರ್ಕ ಜಾಲವು ದೇಶದಿಂದ ಆಚೆಗೂ ಇದೆ. ಎಲ್ಲ ದೃಷ್ಟಿಕೋನಗಳಿಂದಲೂ ತನಿಖೆ ನಡೆದಿದೆ ಎಂದು ಅವರು ಹೇಳಿದರು.