ಕಠ್ಮಂಡು : ನೇಪಾಳದ 18 ವರ್ಷದ ತರುಣ ನಿಮಾ ರಿಂಜಿ ಶೆರ್ಪಾ ಅವರು ಜಗತ್ತಿನ 8 ಸಾವಿರ ಮೀಟರ್ ಎತ್ತರದ ಎಲ್ಲಾ ಶಿಖರಗಳನ್ನು ಏರಿ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿಯೆಂಬ ದಾಖಲೆಯನ್ನು ಸ್ಥಾಪಿಸಿದ್ದಾರೆ.
0
samarasasudhi
ಅಕ್ಟೋಬರ್ 12, 2024
ಕಠ್ಮಂಡು : ನೇಪಾಳದ 18 ವರ್ಷದ ತರುಣ ನಿಮಾ ರಿಂಜಿ ಶೆರ್ಪಾ ಅವರು ಜಗತ್ತಿನ 8 ಸಾವಿರ ಮೀಟರ್ ಎತ್ತರದ ಎಲ್ಲಾ ಶಿಖರಗಳನ್ನು ಏರಿ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿಯೆಂಬ ದಾಖಲೆಯನ್ನು ಸ್ಥಾಪಿಸಿದ್ದಾರೆ.
ನಿಮಾ ರಿಂಜಿ ಶೆರ್ಪಾ ಅವರು ಬುಧವಾರ ಬೆಳಗ್ಗೆ ಶಿಶಾ ಪಂಗ್ಮಾ (8027 ಮೀ.
8 ಸಾವಿರ ಮೀಟರ್ ಎತ್ತರದ ಎಲ್ಲಾ 14 ಶಿಖರಗಳನ್ನು ಏರುವುಜು ಪರ್ವತಾರೋಹಿಗಳ ಅತ್ಯುನ್ನತ ಸಾಧನೆಯೆಂದು ಭಾವಿಸಲಾಗುತ್ತದೆ. ಇಷ್ಟು ಎತ್ತರದ ಪರ್ವತಗಳಲ್ಲಿ ಅಮ್ಲಜನಕವು ಸಾಕಷ್ಟು ಪ್ರಮಾಣದಲ್ಲಿ ದೊರೆಯುವುದಿಲ್ಲವಾದ್ದರಿಂದ ಪರ್ವತಾರೋಹಿಗಳು 'ಸಾವಿನ ವಲಯ'ಗಳನ್ನು ದಾಟಿಬರಬೇಕಾದ ಪರಿಸ್ಥಿತಿಯಿರುತ್ತದೆ.
ಶಿಸಾ ಪಂಗ್ಮಾ ಶಿಖರಾರೋಹಣವನ್ನು ಪೂರ್ಣಗೊಳಿಸಿದ ಬಳಿಕ ನಿಮಾ ರಿಜಿ ಶೆರ್ಪಾ ಅವರು ಹೇಳಿಕೆಯೊಂದನ್ನು ನೀಡಿ, ಈ ಶಿಖರಾರೋಹಣವು, ನಮಗಾಗಿ ನಿಗದಿಪಡಿಸಿದ ಸಾಂಪ್ರದಾಯಿಕ ಗಡಿಗಳ ಆಚೆಗೂ ತೆರಳುವ ಧೈರ್ಯ ಮಾಡಿದ ಪ್ರತಿಯೊಬ್ಬ ಶೆರ್ಪಾಗೂ ಸಲ್ಲಿಸಿದ ಶ್ರದ್ದಾಂಜಲಿಯೆಂದು ಅವರು ಹೇಳಿದ್ದಾರೆ.
ಪರ್ವತಾರೋಹಣವು ಶ್ರಮಕ್ಕಿಂತಲೂ ಮಿಗಿಲಾದುದಾಗಿದೆ. ನಮ್ಮ ಬಲ,ಪ್ರತಿರೋಧ ಸಾಮರ್ಥ್ಯ ಹಾಗೂ ತುಡಿತದ ಅಗ್ನಿಪರೀಕ್ಷೆ ಇದಾಗಿದೆ ಎಂದು ಶಿಶಾ ಪಂಗ್ಮಾ ಹೇಳಿದ್ದಾರೆ.