ನವದೆಹಲಿ: ಭೂವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ರಾಜ್ಯಸಭಾ ಸಂಸದ ಸಂಜೀವ್ ಅರೋರಾ ಅವರಿಗೆ ಸೇರಿದ ಜಲಂಧರ್, ದೆಹಲಿಯ ವಿವಿಧ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು ಸೋಮವಾರ ದಾಳಿ ನಡೆಸಿದೆ.
0
samarasasudhi
ಅಕ್ಟೋಬರ್ 08, 2024
ನವದೆಹಲಿ: ಭೂವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ರಾಜ್ಯಸಭಾ ಸಂಸದ ಸಂಜೀವ್ ಅರೋರಾ ಅವರಿಗೆ ಸೇರಿದ ಜಲಂಧರ್, ದೆಹಲಿಯ ವಿವಿಧ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು ಸೋಮವಾರ ದಾಳಿ ನಡೆಸಿದೆ.
ಎಎಪಿಯನ್ನು ನಾಶಗೊಳಿಸುವ ಉದ್ದೇಶದಿಂದಲೇ 'ರಾಜಕೀಯ ಪ್ರೇರಿತ' ದಾಳಿ ನಡೆಸಲಾಗಿದೆ' ಎಂದು ಪಕ್ಷವು ಆರೋಪಿಸಿದೆ.
ಲೂಧಿಯಾನ ಹಾಗೂ ಗುರುಗ್ರಾಮದಲ್ಲಿರುವ ಸಂಸದರ ನಿವಾಸ ಸೇರಿದಂತೆ 16ರಿಂದ 17 ಸ್ಥಳ ಸೇರಿದಂತೆ, ರಿಯಲ್ ಎಸ್ಟೇಟ್ ಉದ್ಯಮಿ ಹೇಮಂತ್ ಸೂಡ್, ಜಲಂಧರ್‌ನ ಚಂದ್ರಶೇಖರ್ ಅಗರ್‌ವಾಲ್ ಅವರಿಗೆ ಸೇರಿದ ಸ್ಥಳಗಳಲ್ಲಿಯೂ ಇ.ಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದರು.
'ನಾನು ಕಾನೂನು ಗೌರವಿಸುವ ವ್ಯಕ್ತಿ. ಯಾವ ಕಾರಣಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂಬುದು ಗೊತ್ತಿಲ್ಲ. ತನಿಖಾ ಸಂಸ್ಥೆಗಳ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಲಿದ್ದು, ಅವರ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುತ್ತೇನೆ' ಎಂದು ಸಾಮಾಜಿಕ ಜಾಲತಾಣ 'ಎಕ್ಸ್' ಮೂಲಕ ಸಂಸದ ಸಂಜೀವ್ ಅರೋರಾ ತಿಳಿಸಿದ್ದಾರೆ.
'ತಮ್ಮ ಕಂಪನಿಯ ಹೆಸರಿನಲ್ಲಿದ್ದ 'ಕೈಗಾರಿಕಾ ನಿವೇಶನ'ವನ್ನು ಅಕ್ರಮವಾಗಿ ಪರಭಾರೆ ಮಾಡಿದ ಆರೋಪದ ಮೇಲೆ ಸಂಸದರ ಮೇಲೆ ಇ.ಡಿ ಈ ದಾಳಿ ನಡೆಸಿತ್ತು' ಎಂದು ಮೂಲಗಳು ತಿಳಿಸಿವೆ.
ಅರೋರಾ ಅವರನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಆಮ್‌ಆದ್ಮಿ ಪಕ್ಷ, ಇ.ಡಿ. ಕಾರ್ಯಾಚರಣೆಯು ರಾಜಕೀಯ ಪ್ರೇರಿತವಾಗಿದೆ. ಯಾವುದೇ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ, ಬದಲಾಗಿ ಪಕ್ಷವನ್ನು ಮುಗಿಸುವ ಮತ್ತೊಂದು ಪ್ರಯತ್ನ' ಎಂದು ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.