ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ಬಳಿಕ ಮೊದಲ ಬಾರಿಗೆ ದೀಪಾವಳಿ ಆಚರಿಸಲಾಗುತ್ತಿದ್ದು ಉತ್ತರ ಪ್ರದೇಶ ಸರ್ಕಾರ ಮತ್ತು ದೇಗುಲದ ಟ್ರಸ್ಟ್ ಸಕಲ ಸಿದ್ಧತೆ ಮಾಡಿಕೊಂಡಿದೆ.
0
samarasasudhi
ಅಕ್ಟೋಬರ್ 28, 2024
ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ಬಳಿಕ ಮೊದಲ ಬಾರಿಗೆ ದೀಪಾವಳಿ ಆಚರಿಸಲಾಗುತ್ತಿದ್ದು ಉತ್ತರ ಪ್ರದೇಶ ಸರ್ಕಾರ ಮತ್ತು ದೇಗುಲದ ಟ್ರಸ್ಟ್ ಸಕಲ ಸಿದ್ಧತೆ ಮಾಡಿಕೊಂಡಿದೆ.
ಸರಯೂ ನದಿಯ ತಟದಲ್ಲಿ 28 ಲಕ್ಷ ಪರಿಸರ ಸ್ನೇಹಿ ಹಣತೆಗಳಲ್ಲಿ ದೀಪ ಬೆಳಗಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸುವ ಗುರಿ ಹೊಂದಿದೆ ಎಂದು ಸರ್ಕಾರ ಹೇಳಿದೆ.
ಈ ದೀಪಾವಳಿಯಲ್ಲಿ ಅಯೋಧ್ಯೆಯನ್ನು ಕೇವಲ ಧರ್ಮ ಮತ್ತು ನಂಬಿಕೆಯ ಕೇಂದ್ರವನ್ನಾಗಿ ಮಾಡದೆ, ಸ್ವಚ್ಛತೆ ಮತ್ತು ಪರಿಸರ ಪ್ರಜ್ಞೆಯ ಸಂಕೇತವನ್ನಾಗಿ ಮಾಡುವ ಗುರಿಯನ್ನು ದೇವಾಲಯ ಟ್ರಸ್ಟ್ ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.
ಜತೆಗೆ ರಾಮ ಮಂದಿರದ ದೀಪೋತ್ಸವವನ್ನು ವೀಕ್ಷಿಸಲು ಅ.29ರಿಂದ ನ.1ರವರೆಗೆ ದೇವಾಲಯವನ್ನು ಭಕ್ತರಿಗೆ ಮುಕ್ತವಾಗಿಡಲಾಗುವುದು. ಗೇಟ್ ನಂ4 ಬಿ (ಲಗೇಜ್ ಸ್ಕ್ಯಾನರ್ ಪಾಯಿಂಟ್) ನಿಂದ ದೇವಾಲಯವನ್ನು ವೀಕ್ಷಿಸಬಹುದು ಎಂದು ಟ್ರಸ್ಟ್ ತಿಳಿಸಿದೆ.