ಜೆರುಸಲೇಂ: ಹಮಾಸ್ ಮುಖ್ಯಸ್ಥ ಯಹ್ಯಾ ಸಿನ್ವರ್ ಹತ್ಯೆ ಬೆನ್ನಲ್ಲೇ, ಇಸ್ರೇಲ್ ಉತ್ತರ ಭಾಗದ ಸೆಸೆರಿಯಾ ನಗರದಲ್ಲಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮನೆಯನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಲಾಗಿದೆ ಎಂದು ಅವರ ವಕ್ತಾರ ತಿಳಿಸಿದ್ದಾರೆ. ಆದರೆ ಪ್ರಧಾನಿಯವರು ಮನೆಯಲ್ಲಿ ಇರಲಿಲ್ಲ.
0
samarasasudhi
ಅಕ್ಟೋಬರ್ 19, 2024
ಜೆರುಸಲೇಂ: ಹಮಾಸ್ ಮುಖ್ಯಸ್ಥ ಯಹ್ಯಾ ಸಿನ್ವರ್ ಹತ್ಯೆ ಬೆನ್ನಲ್ಲೇ, ಇಸ್ರೇಲ್ ಉತ್ತರ ಭಾಗದ ಸೆಸೆರಿಯಾ ನಗರದಲ್ಲಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮನೆಯನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಲಾಗಿದೆ ಎಂದು ಅವರ ವಕ್ತಾರ ತಿಳಿಸಿದ್ದಾರೆ. ಆದರೆ ಪ್ರಧಾನಿಯವರು ಮನೆಯಲ್ಲಿ ಇರಲಿಲ್ಲ.
ನೆತನ್ಯಾಹು ಅವರ ರಜಾ ದಿನಗಳ ಮನೆ ಇರುವ ಕರಾವಳಿ ಪಟ್ಟಣದಲ್ಲಿ ಸ್ಫೋಟಗಳು ಕೇಳಿಬಂದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಇಸ್ರೇಲಿ ಆಯಂಬುಲೆನ್ಸ್ ಸೇವೆ ಮತ್ತು ಪೊಲೀಸ್ ವರದಿ ಹೇಳಿದೆ.
ಹಿಜ್ಬುಲ್ಲಾ ಅಥವಾ ಇತರ ಯಾವುದೇ ಸಂಘಟನೆಗಳು ತಕ್ಷಣವೇ ಡ್ರೋನ್ ದಾಳಿಯ ಹೊಣೆ ಹೊತ್ತಿಲ್ಲ.