ಪ್ಯಾರಿಸ್: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಅವರು ಫ್ರಾನ್ಸ್ ವಿದೇಶಾಂಗ ಸಚಿವ ಜೀನ್-ನೊಯೆಲ್ ಬ್ಯಾರೋಟ್ ಅವರನ್ನು ಬುಧವಾರ ಭೇಟಿ ಮಾಡಿದರು.
0
samarasasudhi
ಅಕ್ಟೋಬರ್ 03, 2024
ಪ್ಯಾರಿಸ್: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಅವರು ಫ್ರಾನ್ಸ್ ವಿದೇಶಾಂಗ ಸಚಿವ ಜೀನ್-ನೊಯೆಲ್ ಬ್ಯಾರೋಟ್ ಅವರನ್ನು ಬುಧವಾರ ಭೇಟಿ ಮಾಡಿದರು.
ಈ ಭೇಟಿಯಲ್ಲಿ ಯುರೋಪ್ ಮತ್ತು ಪಶ್ಚಿಮ ಏಷ್ಯಾದಲ್ಲಿನ ಯುದ್ಧಗಳ ಕುರಿತ ತಮ್ಮ ನಿಲುವುಗಳನ್ನು ಹಂಚಿಕೊಂಡಿದ್ದಾರೆ ಎಂದು ಫ್ರಾನ್ಸ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ 'ಎಕ್ಸ್' ಜಾಲತಾಣದಲ್ಲಿ ತಿಳಿಸಿದೆ.
ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯ ಕುರಿತು ಎಲ್ಲರಿಗೂ ಸಂಯಮದಿಂದ ವರ್ತಿಸುವಂತೆ ಭಾರತವು ಸಲಹೆ ನೀಡಿದೆ. ಸಂಘರ್ಷವು ಪ್ರಾದೇಶಿಕವಾಗಿ ವಿಸ್ತೃತ ಆಯಾಮವನ್ನು ಪಡೆದುಕೊಳ್ಳಬಾರದು ಎಂದೂ ಹೇಳಿದೆ.
ಮಂಗಳವಾರ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಡೋವಲ್ ಭೇಟಿಯಾಗಿದ್ದು, ಶಾಂತಿ ಸ್ಥಾಪನೆ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸಲು ಭಾರತ ಮತ್ತು ಫ್ರಾನ್ಸ್‌ನ ಪ್ರಯತ್ನಗಳ ಕುರಿತು ಚರ್ಚಿಸಿದರು.