ನವದೆಹಲಿ: 'ತಮ್ಮ ಬಳಿ ಹೊಸದಾಗಿ ಕೆಲಸಕ್ಕೆ ಸೇರುವ ಕಾನೂನು ಪದವೀಧರರಿಗೆ ಹಿರಿಯ ವಕೀಲರು ಸೂಕ್ತ ವೇತನ ನೀಡಬೇಕು' ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ.
0
samarasasudhi
ಅಕ್ಟೋಬರ್ 27, 2024
ನವದೆಹಲಿ: 'ತಮ್ಮ ಬಳಿ ಹೊಸದಾಗಿ ಕೆಲಸಕ್ಕೆ ಸೇರುವ ಕಾನೂನು ಪದವೀಧರರಿಗೆ ಹಿರಿಯ ವಕೀಲರು ಸೂಕ್ತ ವೇತನ ನೀಡಬೇಕು' ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ.
'ಕಾನೂನು ವೃತ್ತಿ ಕಷ್ಟಕರವಾದುದು. ಆರಂಭಿಕ ವರ್ಷಗಳಲ್ಲಿನ ಅಡಿಪಾಯವು ಯುವ ವಕೀಲರನ್ನು ಅವರ ವೃತ್ತಿಜೀವನದುದ್ದಕ್ಕೂ ಉತ್ತಮ ಸ್ಥಾನದಲ್ಲಿರಿಸುತ್ತದೆ' ಎಂದು ಆಲ್ ಇಂಡಿಯಾ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.
'ವೃತ್ತಿಯಲ್ಲಿ ಯಾವಾಗಲೂ ಏರಿಳಿತಗಳು ಇರುತ್ತವೆ. ಕೆಲಸದಲ್ಲಿ ಕಠಿಣ ಪರಿಶ್ರಮದಿಂದ ತೊಡಗಿಸಿಕೊಳ್ಳಲು ಹಾಗೂ ಪ್ರಾಮಾಣಿಕವಾಗಿರಲು ಸೂಕ್ತ ಸಂಬಳ ನೀಡಿ ಪ್ರೋತ್ಸಾಹಿಸುವುದು ಮುಖ್ಯವಾಗಿದೆ' ಎಂದಿದ್ದಾರೆ.
'ಹೊಸಬರು ಕಲಿಯಲಿಕ್ಕಾಗಿಯೇ ಹಿರಿಯ ವಕೀಲರ ಕಚೇರಿಗೆ ಬರುತ್ತಾರೆ. ನಿಮ್ಮೊಂದಿಗೆ ಹಂಚಿಕೊಳ್ಳಲು ಅವರಲ್ಲಿ ಸಾಕಷ್ಟು ಸಂಗತಿಗಳಿರುತ್ತವೆ. ನೀವು ಹೇಳಿಕೊಡಬೇಕಾದ ಹಲವು ವಿಷಯಗಳಿರುತ್ತವೆ' ಎಂದು ಅವರು ಹೇಳಿದ್ದಾರೆ.