ನವದೆಹಲಿ: ದೇಶದ ಮೂಲಭೂತ ಸೌಕರ್ಯ ವಲಯಗಳಲ್ಲಿ ಪರಿಣಾಮಕಾರಿ ಬದಲಾವಣೆ ತರುವ ಗುರಿಯೊಂದಿಗೆ ಆರಂಭಗೊಂಡಿರುವ ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯು ಎಲ್ಲ ವಲಯಗಳ ಕ್ಷಿಪ್ರ ಮತ್ತು ಸಮರ್ಪಕ ಅಭಿವೃದ್ಧಿಗೆ ಕಾರಣವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹರ್ಷ ವ್ಯಕ್ತಪಡಿಸಿದರು.
0
samarasasudhi
ಅಕ್ಟೋಬರ್ 14, 2024
ನವದೆಹಲಿ: ದೇಶದ ಮೂಲಭೂತ ಸೌಕರ್ಯ ವಲಯಗಳಲ್ಲಿ ಪರಿಣಾಮಕಾರಿ ಬದಲಾವಣೆ ತರುವ ಗುರಿಯೊಂದಿಗೆ ಆರಂಭಗೊಂಡಿರುವ ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯು ಎಲ್ಲ ವಲಯಗಳ ಕ್ಷಿಪ್ರ ಮತ್ತು ಸಮರ್ಪಕ ಅಭಿವೃದ್ಧಿಗೆ ಕಾರಣವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹರ್ಷ ವ್ಯಕ್ತಪಡಿಸಿದರು.
ಈ ಯೋಜನೆ ಚಾಲನೆಗೊಂಡು ಮೂರು ವರ್ಷ ಪೂರ್ಣಗೊಂಡಿದೆ. 'ಗತಿಶಕ್ತಿಗೆ ಧನ್ಯವಾದ. ವಿಕಸಿತ ಭಾರತದ ಪರಿಕಲ್ಪನೆಯ ವೇಗವನ್ನು ಇದು ಹೆಚ್ಚಿಸಿದೆ. ಪ್ರಗತಿ, ಉದ್ಯಮ ಮತ್ತು ಸಂಶೋಧನೆಯನ್ನು ಗತಿಶಕ್ತಿ ಪ್ರೋತ್ಸಾಹಿಸುತ್ತಿದೆ' ಎಂದು ಪ್ರಧಾನಿ ಮೋದಿ 'ಎಕ್ಸ್' ಮೂಲಕ ತಿಳಿಸಿದರು. ಈ ಪೋಸ್ಟ್ ಅನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
'ಪ್ರಧಾನ ಮಂತ್ರಿ ಗತಿಶಕ್ತಿ ಯೋಜನೆಯು ಆಧುನಿಕ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಹಕರಿಸುವ ಮೂಲಕ ವಿಕಸಿತ ಭಾರತ ಪರಿಕಲ್ಪನೆಗೆ ಬಲ ತುಂಬಿದೆ' ಎಂದು ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
2021 ಅ.13ರಂದು ಪ್ರಾರಂಭವಾಗಿರುವ ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯು ವಿವಿಧ ಆರ್ಥಿಕ ವಲಯಗಳಿಗೆ ಸಂಪರ್ಕ ಸಾಧಿಸಲು ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸುತ್ತದೆ.