ಗುರುಗ್ರಾಮ: ಇನ್‌ಸ್ಟಾಗ್ರಾಮ್‌ನಲ್ಲಿ ಅಪರಿಚಿತ ಖಾತೆಯಿಂದ ಬಂದ ವಿಡಿಯೊ ಕರೆಯನ್ನು ಸ್ವೀಕರಿಸಿದ ಯುವಕನೊಬ್ಬ ಬರೋಬ್ಬರಿ ₹1.20 ಲಕ್ಷ ಕಳೆದುಕೊಂಡಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
0
samarasasudhi
ಅಕ್ಟೋಬರ್ 16, 2024
ಗುರುಗ್ರಾಮ: ಇನ್‌ಸ್ಟಾಗ್ರಾಮ್‌ನಲ್ಲಿ ಅಪರಿಚಿತ ಖಾತೆಯಿಂದ ಬಂದ ವಿಡಿಯೊ ಕರೆಯನ್ನು ಸ್ವೀಕರಿಸಿದ ಯುವಕನೊಬ್ಬ ಬರೋಬ್ಬರಿ ₹1.20 ಲಕ್ಷ ಕಳೆದುಕೊಂಡಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಆರೋಪಿಗಳು ಇನ್‌ಸ್ಟಾಗ್ರಾಮ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ ಯುವಕನೊಂದಿಗೆ ಅಶ್ಲೀಲ ವಿಡಿಯೊ ಕರೆ ಮಾಡಿ, 10 ರಿಂದ 15 ಸೆಕೆಂಡ್ ಕರೆಯನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ.
ಅಪರಿಚಿತರು ಪದೇ ಪದೇ ನನಗೆ ಬೆದರಿಕೆ ಹಾಕಿ ವಿವಿಧ ಹಂತಗಳಲ್ಲಿ ಸುಮಾರು ₹1.20 ಲಕ್ಷವನ್ನು ದೋಚಿದ್ದಾರೆ ಎಂದು ಗುರುಗ್ರಾಮ ನಿವಾಸಿ ಹರೀಶ್ ಹೇಳಿದ್ದಾರೆ.
ಈ ಸಂಬಂಧ ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಆರೋಪಿಗಳನ್ನು ಶೀಘ್ರವಾಗಿ ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.