ಬಾಂದಾ: ನಿದ್ರೆ ಮಾಡುವಾಗ ಜೋರಾಗಿ ಅಳುವ ಮೂಲಕ ಅಡಚಣೆ ಉಂಟುಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಐದು ವರ್ಷದ ಪುತ್ರನನ್ನೇ ಕೊಲೆಗೈದಿದ್ದಾನೆ. ಬಳಿಕ ತಾನೂ ಬೆಂಕಿ ಹಚ್ಚಿಕೊಂಡು ಆತ್ಯಹತ್ಯೆಗೆ ಯತ್ನಿಸಿದ್ದಾನೆ.
0
samarasasudhi
ಅಕ್ಟೋಬರ್ 29, 2024
ಬಾಂದಾ: ನಿದ್ರೆ ಮಾಡುವಾಗ ಜೋರಾಗಿ ಅಳುವ ಮೂಲಕ ಅಡಚಣೆ ಉಂಟುಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಐದು ವರ್ಷದ ಪುತ್ರನನ್ನೇ ಕೊಲೆಗೈದಿದ್ದಾನೆ. ಬಳಿಕ ತಾನೂ ಬೆಂಕಿ ಹಚ್ಚಿಕೊಂಡು ಆತ್ಯಹತ್ಯೆಗೆ ಯತ್ನಿಸಿದ್ದಾನೆ.
ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಈ ಘಟನೆ ಜರುಗಿದ್ದು, ಪ್ರಕರಣ ಸಂಬಂಧ ರಾಜ್‌ಕುಮಾರ್ ನಿಷಾದ್(35) ಎಂಬಾತನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
'ಭಾನುವಾರ ರಾತ್ರಿ ನಿದ್ರಿಸುವಾಗ ಪುತ್ರ ಜೋರಾಗಿ ಅತ್ತು, ತೊಂದರೆ ಕೊಡುತ್ತಿದ್ದ. ಹಾಗಾಗಿ, ಕೊಡಲಿಯಿಂದ ಆತನ ಶಿರವನ್ನು ಕತ್ತರಿಸಿದೆ' ಎಂದು ಆರೋಪಿಯು ತಪ್ಪೊಪ್ಪಿಕೊಂಡಿದ್ದಾನೆ. ಕೊಲೆ ಬಳಿಕ ದಿಗ್ಭ್ರಮೆಗೊಂಡ ಆತ, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಷ್ಟರಲ್ಲಿ ಗ್ರಾಮಸ್ಥರು ಆತನನ್ನು ರಕ್ಷಿಸಿ, ಪೊಲೀಸ್ ವಶಕ್ಕೆ ನೀಡಿದ್ದಾರೆ. ಬಂಧಿತನಿಂದ ಕೊಲೆಗೆ ಬಳಸಲಾದ ಕೊಡಲಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿವೈಎಸ್ಪಿ ರಾಜಕರಣ್ ಅವರು ತಿಳಿಸಿದ್ದಾರೆ.