ಬರಾನ್ ನಗರ: ತಮ್ಮದೇ ಭದ್ರತೆಗಾಗಿ ಹಿಂದೂಗಳು ಜಾತಿ, ಭಾಷೆ, ಪ್ರಾಂತ್ಯ ಮುಂತಾದ ಭಿನ್ನಾಭಿಪ್ರಾಯ ಮತ್ತು ವಿವಾದಗಳನ್ನು ಬಿಟ್ಟು ಒಂದಾಗಬೇಕಿದೆ ಎಂದು ರಾಷ್ಟ್ರೀಯ ಸ್ವತಂ ಸೇವಕ ಸಂಘದ(ಆರ್‌ಎಸ್‌ಎಸ್) ಸರ ಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
0
samarasasudhi
ಅಕ್ಟೋಬರ್ 06, 2024
ಬರಾನ್ ನಗರ: ತಮ್ಮದೇ ಭದ್ರತೆಗಾಗಿ ಹಿಂದೂಗಳು ಜಾತಿ, ಭಾಷೆ, ಪ್ರಾಂತ್ಯ ಮುಂತಾದ ಭಿನ್ನಾಭಿಪ್ರಾಯ ಮತ್ತು ವಿವಾದಗಳನ್ನು ಬಿಟ್ಟು ಒಂದಾಗಬೇಕಿದೆ ಎಂದು ರಾಷ್ಟ್ರೀಯ ಸ್ವತಂ ಸೇವಕ ಸಂಘದ(ಆರ್‌ಎಸ್‌ಎಸ್) ಸರ ಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
ಬರಾನ್ ನಗರದ ಕ್ರಿಷಿ ಉಪಾಜ್ ಮಂಡಿಯಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಾಜದಲ್ಲಿ ಶಿಸ್ತು, ಕರ್ತವ್ಯ ಪ್ರಜ್ಞೆ ಮತ್ತು ಗುರಿ ಸಾಧಿಸುವ ಗುಣ ಅಗತ್ಯ ಎಂದು ಹೇಳಿದ್ದಾರೆ.
'ಹಿಂದೂ ಸಮಾಜವು ತನ್ನ ಭದ್ರತೆಗಾಗಿ ಭಾಷೆ, ಜಾತಿ ಮತ್ತು ಪ್ರಾಂತ್ಯದ ಭಿನ್ನಾಭಿಪ್ರಾಯ ಹಾಗೂ ವಿವಾದಗಳನ್ನು ತೊಡೆದುಹಾಕುವ ಮೂಲಕ ಒಂದಾಗಬೇಕು. ಸಮಾಜವು ಸಂಘಟನೆ, ಸದ್ಭಾವನೆ ಮತ್ತು ಅನ್ಯೋನ್ಯತೆಯನ್ನು ಹೊಂದಿರಬೇಕು. ಸಮಾಜದಲ್ಲಿ ಶಿಸ್ತು, ಕರ್ತವ್ಯ ಪ್ರಜ್ಞೆ ಮತ್ತು ಗುರಿ ಸಾಧಿಸುವ ಗುಣ ಅಗತ್ಯ. ಸಮಾಜವು ನಾನು ಮತ್ತು ನನ್ನ ಕುಟುಂಬದಿಂದ ಮಾತ್ರ ನಿರ್ಮಾಣವಾಗಿಲ್ಲ; ಸಮಾಜದ ಬಗ್ಗೆ ಸರ್ವತೋಮುಖ ಕಾಳಜಿಯನ್ನು ತೆಗೆದುಕೊಳ್ಳುವ ಮೂಲಕ ನಮ್ಮ ಜೀವನದಲ್ಲಿ ದೇವರನ್ನು ಸಾಧಿಸಬೇಕು'ಎಂದು ಅವರು ಹೇಳಿದ್ದಾರೆ.
'ಭಾರತವು ಹಿಂದೂ ರಾಷ್ಟ್ರ, ಪ್ರಾಚೀನ ಕಾಲದಿಂದಲೂ ನಾವು ಇಲ್ಲಿ ವಾಸಿಸುತ್ತಿದ್ದೇವೆ. ಹಿಂದೂ ಎಂಬ ಪದ ಬಳಿಕ ಬಂದಿದೆ. ಹಿಂದೂಗಳು ಎಲ್ಲರನ್ನೂ ತಮ್ಮವರೆಂದು ಭಾವಿಸುತ್ತಾರೆ. ಎಲ್ಲರನ್ನೂ ಒಪ್ಪಿಕೊಳ್ಳುತ್ತಾರೆ. ನಾವು ಸರಿ ಮತ್ತು ನಿಮ್ಮ ಜಾಗದಲ್ಲಿ ನೀವೂ ಸರಿ ಎಂದು ಹಿಂದೂಗಳು ಹೇಳುತ್ತಾರೆ'ಎಂದು ಭಾಗವತ್ ಹೇಳಿದ್ದಾರೆ.
ಆರ್‌ಎಸ್‌ಎಸ್‌ನ ಕೆಲಸವು ಯಾಂತ್ರಿಕವಲ್ಲ. ಅದು ಚಿಂತನೆ ಆಧಾರಿತವಾಗಿದೆ. ಆರ್‌ಎಸ್‌ಎಸ್ ಮಾಡಿದ ಕೆಲಸಕ್ಕೆ ಹೋಲಿಸಬಹುದಾದ ಯಾವುದೇ ಕೆಲಸ 'ಜಗತ್ತಿನಲ್ಲಿ' ಇಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.