ಆಗ್ರಾ: ವಿಶ್ವವಿಖ್ಯಾತ ತಾಜ್‌ಮಹಲ್‌ಗೆ ಮಂಗಳವಾರ ಭೇಟಿ ನೀಡಿದ ಮಾಲ್ದೀವ್ಸ್‌ನ ಅಧ್ಯಕ್ಷ ಮೊಹಮ್ಮದ್ ಮುಯಿಜು ಮತ್ತು ಅವರ ಪತ್ನಿ ಸಾಜಿದಾ ಮೊಹಮ್ಮದ್, ಅಲ್ಲಿನ ವಾಸ್ತುಶಿಲ್ಪದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.
0
samarasasudhi
ಅಕ್ಟೋಬರ್ 09, 2024
ಆಗ್ರಾ: ವಿಶ್ವವಿಖ್ಯಾತ ತಾಜ್‌ಮಹಲ್‌ಗೆ ಮಂಗಳವಾರ ಭೇಟಿ ನೀಡಿದ ಮಾಲ್ದೀವ್ಸ್‌ನ ಅಧ್ಯಕ್ಷ ಮೊಹಮ್ಮದ್ ಮುಯಿಜು ಮತ್ತು ಅವರ ಪತ್ನಿ ಸಾಜಿದಾ ಮೊಹಮ್ಮದ್, ಅಲ್ಲಿನ ವಾಸ್ತುಶಿಲ್ಪದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.
'ಈ ಪ್ರವಾಸಿ ತಾಣದ ಸೌಂದರ್ಯವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.
ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಮುಯಿಜು ಮತ್ತು ಅವರ ಪತ್ನಿಯನ್ನು ಉತ್ತರಪ್ರದೇಶದ ಸಚಿವ ಯೋಗೇಂದ್ರ ಉಪಾಧ್ಯಾಯ ಅವರು ಆಗ್ರಾ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
'ಮುಯಿಜು ಮತ್ತು ಅವರೊಂದಿಗಿದ್ದ ತಂಡವು ತಾಜ್‌ಮಹಲ್‌ನ ಇತಿಹಾಸ ಮತ್ತು ವೈಶಿಷ್ಟ್ಯತೆಗಳನ್ನು ಬಹಳ ಆಸಕ್ತಿಯಿಂದ ತಿಳಿದುಕೊಂಡರು' ಎಂದು ಸಚಿವ ಉಪಾಧ್ಯಾಯ ಅವರು ತಿಳಿಸಿದ್ದಾರೆ.
ಮುಯಿಜು ಭೇಟಿ ಕಾರಣಕ್ಕೆ ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ 10 ಗಂಟೆಯವರೆಗೆ ತಾಜ್‌ಮಹಲ್‌ಗೆ ಸಾರ್ವಜನಿಕರು ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿತ್ತು.
ಕರಕುಶಲ ಗ್ರಾಮವಾಗಿರುವ ಶಿಲ್ಪಗ್ರಾಮಕ್ಕೂ ಮುಯಿಜು ಭೇಟಿ ನೀಡಿದರು.