HEALTH TIPS

J&K Assembly Election: ಮೊದಲ ಬಾರಿ ಮತ ಚಲಾಯಿಸಿದ ವಾಲ್ಮೀಕಿ ಸಮುದಾಯದ ಜನ

       ಶ್ರೀನಗರ:‌ ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯ ಅಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ನಂತರ ಇದೇ ಮೊದಲ ಬಾರಿಗೆ ವಾಲ್ಮೀಕಿ ಸಮುದಾಯದ ಸದಸ್ಯರು ಮಂಗಳವಾರ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು.

        ವಾಲ್ಮೀಕಿ ಸಮುದಾಯದವರನ್ನು 1957ರಲ್ಲಿ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯಿಂದ ಜಮ್ಮು ಕಾಶ್ಮೀರಕ್ಕೆ ಸ್ವಚ್ಛತಾ ಕೆಲಸಕ್ಕಾಗಿ ಕರೆತರಲಾಗಿತ್ತು.

           ಮೊದಲ ಬಾರಿಗೆ ಹಕ್ಕು ಚಲಾಯಿಸಿ ಹಲವರು ಸಂತಸ ವ್ಯಕ್ತಪಡಿಸಿದರು. 'ನನ್ನ 45 ವರ್ಷಗಳ ಜೀವನದಲ್ಲಿ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆಯಲ್ಲಿ ಮತಚಲಾಯಿಸಿದ್ದೇನೆ. ಇದೊಂದು ಹಬ್ಬದಂತೆ ಭಾಸವಾಗುತ್ತಿದೆ. ನಮ್ಮ ಸಮುದಾಯದ ಜನರು ಸುಮಾರು ಎರಡು ತಲೆಮಾರುಗಳಿಂದ ಮತದಾನದ ಹಕ್ಕುಗಳಿಲ್ಲದೆ ಬದುಕಿದ್ದಾರೆ. ಆದರೆ 370ನೇ ವಿಧಿಯಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಬಳಿಕ ನಮಗೂ ನ್ಯಾಯ ದೊರಕಿದೆ. ಒಂದು ಕಾಲದಲ್ಲಿ ಜಮ್ಮು ಮತ್ತು ಕಾಶ್ಮೀರದ ನ್ಯಾಯ ಮತ್ತು ಸಾಂವಿಧಾನಿಕ ಚೌಕಟ್ಟಿನಲ್ಲಿ ಕಪ್ಪು ಚುಕ್ಕೆಯಾಗಿದ್ದೆವು. 75 ವರ್ಷಗಳ ನಂತರ ಇಂದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಭಾಗವಾಗಿ ವಾಲ್ಮೀಕಿ ಸಮಾಜ, ಪಾಕಿಸ್ತಾನದ ನಿರಾಶ್ರಿತರು ಹಾಗೂ ಗೂರ್ಖಾ ಸಮುದಾಯದವರು ಹಕ್ಕು ಪಡೆದುಕೊಳ್ಳಲು ಸಾಧ್ಯವಾಯಿತು' ಎಂದು ಘಾರು ಭಾಟಿ ಎನ್ನುವವರು ಖುಷಿ ಹಂಚಿಕೊಂಡಿದ್ದಾರೆ.

'ಈ ಹಿಂದೆ ಸರಿಸುಮಾರು 12 ಸಾವಿರ ಜನರು ಮತದಾನದ ಹಕ್ಕು, ಶಿಕ್ಷಣ, ಉದ್ಯೋಗಾವಕಾಶ ಮತ್ತು ಭೂ ಮಾಲೀಕತ್ವದಿಂದ ವಂಚಿತರಾಗಿದ್ದರು. ಆದರೆ ಈಗ ಭೂಮಿ ಖರೀದಿಸಬಹುದು, ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದು, ಚುನಾವಣೆಗಳಲ್ಲಿ ಭಾಗವಹಿಸಬಹುದು. ವಾಲ್ಮೀಕಿ ಸಮುದಾಯದ ಜನರು ಪರ್ಯಾಯ ಜೀವನೋಪಾಯಗಳನ್ನು ಹುಡುಕಬಹುದು' ಎಂದೂ ಅಭಿಪ್ರಾಯ ಹಂಚಿಕೊಂಡರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries