ವ್ಯಾಲೆನ್ಸಿಯಾ, ಬರಿಯೋ ಡಿ ಲಾ ಟೊರ್ರೆ : ಭಾರಿ ಮಳೆಯಿಂದಾಗಿ ಸ್ಪೇನ್‌ನಲ್ಲಿ ಭೀಕರ ಪ್ರವಾಹ ಸಂಭವಿಸಿದ್ದು, ಸಾವಿಗೀಡಾದವರ ಸಂಖ್ಯೆ 158ಕ್ಕೇರಿದೆ.
0
samarasasudhi
ನವೆಂಬರ್ 01, 2024
ವ್ಯಾಲೆನ್ಸಿಯಾ, ಬರಿಯೋ ಡಿ ಲಾ ಟೊರ್ರೆ : ಭಾರಿ ಮಳೆಯಿಂದಾಗಿ ಸ್ಪೇನ್‌ನಲ್ಲಿ ಭೀಕರ ಪ್ರವಾಹ ಸಂಭವಿಸಿದ್ದು, ಸಾವಿಗೀಡಾದವರ ಸಂಖ್ಯೆ 158ಕ್ಕೇರಿದೆ.
ನಾಪತ್ತೆಯಾದವರ ಶೋಧಕ್ಕಾಗಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ಸ್ಪೇನ್‌ನಲ್ಲಿ ಈ ಶತಮಾನದಲ್ಲಿ ಸಂಭವಿಸಿದ ಭೀಕರ ದುರಂತ ಇದಾಗಿದೆ.
ನೂರಾರು ಕಾರುಗಳು ಮಣ್ಣಿನಡಿ ಸಿಲುಕಿದ್ದು, ಅದರೊಳಗೆ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯಲಾಗುತ್ತಿದೆ.
ನೂರಾರು ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಮರಗಳು ಬೇರುಸಹಿತ ಬುಡಮೇಲಾಗಿವೆ. ವ್ಯಾಲೆನ್ಸಿಯಾ ಭಾಗದಲ್ಲಿಯೂ ಭಾರಿ ಹಾನಿಯಾಗಿದೆ.
ರಸ್ತೆಗಳು ಹಾನಿಗೊಂಡಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಸುಮಾರು 70 ಜನರನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಸ್ಥಳಗಳಿಗೆ ಕರೆತರಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ನೀರು ಮತ್ತು ವಿದ್ಯುತ್ ಪೂರೈಕೆ ವ್ಯವಸ್ಥೆಯು ಸಂಪೂರ್ಣವಾಗಿ ಹಾನಿಗೊಂಡಿವೆ. ರಸ್ತೆ ಮತ್ತು ರೈಲು ಸಂಚಾರವು ಅಸ್ತವ್ಯಸ್ತಗೊಂಡಿದೆ.