HEALTH TIPS

ಐಪೋನ್ ಅಂತೆ ಐಪೋನ್!: ಕ್ರ್ಯಾಶ್ ಆದ ಪೋನ್: ಗ್ರಾಹಕರಿಗೆ 75,000 ರೂ. ಪರಿಹಾರ ನೀಡಲು ಕೋರ್ಟ್ ತೀರ್ಪು

ಪಾಲಕ್ಕಾಡ್: ಐಪೋನ್ 13 ಪ್ರೊ ಹಾನಿಗೊಳಗಾದ ನಂತರ ಗ್ರಾಹಕರಿಗೆ ಪರಿಹಾರ ನೀಡುವಂತೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ನ್ಯಾಯಾಲಯ ಆದೇಶಿಸಿದೆ.

ಪಾಲಕ್ಕಾಡ್ ಎಡತನಾಟುಕರ ಮೂಲದ ಸಂಜಯ್ ಕೃಷ್ಣನ್ ಅವರಿಗೆ ನ್ಯಾಯಾಲಯದಿಂದ ಅನುಕೂಲಕರ ತೀರ್ಪು ಬಂದಿದೆ. 75,000 ಪರಿಹಾರ ನೀಡುವಂತೆ ಕೋರ್ಟ್ ತೀರ್ಪು ನೀಡಿದೆ.

Apple iPhone 13 Pro ಅನ್ನು ಖರೀದಿಸಿದ ಕೆಲವೇ ತಿಂಗಳುಗಳಲ್ಲಿ ಸಮಸ್ಯೆ ಸಂಭವಿಸಿದೆ. ಸಮಸ್ಯೆಯಿಂದಾಗಿ ಪೋನ್ ಅಪ್‍ಡೇಟ್ ಮಾಡಲಾಗುತ್ತಿಲ್ಲ ಎಂದು ಸಂಸ್ಕøತ ಶಿಕ್ಷಕರೂ ಆಗಿರುವ ಸಂಜಯ್ ಕೃಷ್ಣನ್ ನ್ಯಾಯಾಲಯದಲ್ಲಿ ವಾದ ಮಂಡಿಸಿದರು.

ಸ್ಕ್ರೀನ್ ಬಳಸಲಾಗದಷ್ಟು ಹಾಳಾಗಿದೆ ಎಂದು ಸಂಜಯ್ ಹೇಳಿದ್ದು, ದುರಸ್ಥಿ ಮಾಡುವಂತೆ ಆ್ಯಪಲ್ ಸರ್ವೀಸ್ ಸೆಂಟರ್ ಮೊರೆ ಹೋದರೂ ನೌಕರರು ಅಸಭ್ಯವಾಗಿ ವರ್ತಿಸಿದ್ದು, ಸ್ಕ್ರೀನ್ ರಿಪೇರಿ ಮಾಡಿಲ್ಲ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಪೋನ್ ಬೆಲೆಯೊಂದಿಗೆ ಶೇ.10 ಬಡ್ಡಿ ಮತ್ತು ನ್ಯಾಯಾಲಯದ ವೆಚ್ಚ ಸೇರಿ 75,000 ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ. ಒಂದೂವರೆ ವರ್ಷಗಳ ಕಾನೂನು ಹೋರಾಟದ ನಂತರ ಅನುಕೂಲಕರ ತೀರ್ಪು ದೊರೆತಿದೆ ಮತ್ತು ಇತರ ಅನೇಕ ಐಪೋನ್ ಬಳಕೆದಾರರಿಗೆ ಇದೇ ರೀತಿಯ ಅನೇಕ ಸಮಸ್ಯೆಗಳಿವೆ ಎಂದು ಸಂಜಯ್ ಹೇಳಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries