ಸಮರಸ ಚಿತ್ರಸುದ್ದಿ: ಕುಂಬಳೆ: ಶೇಣಿಯಲ್ಲಿ ಇತ್ತೀಚೆಗೆ ನಡೆದ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಹೈಸ್ಕೂಲ್ ವಿಭಾಗದ ಲಘು ಸಂಗೀತ ಸ್ಪರ್ಧೆಯಲ್ಲಿ ಸೂರಂಬೈಲು ಸರ್ಕಾರಿ ಪ್ರೌಢಶಾಲೆಯ ಎಂಟನೇ ತರಗತಿಯ ಅಮೃತ ಕೆ. ‘ಎ’ ಗ್ರೇಡಿನೊಂದಿಗೆ ದ್ವಿತೀಯ ಸ್ಥಾನಗಳಿಸಿದ್ದಾರೆ. ಬೇಳ ನಿವಾಸಿ ನಾರಾಯಣ ಪ್ರಕಾಶ್-ಅಶ್ವಿನಿ ದಂಪತಿ ಪುತ್ರಿಯಾದ ಅಮೃತಾಳ ಸಾಧನೆಗೆ ಶಾಲಾ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.