ಮುಳ್ಳೇರಿಯ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ಟರ ಪ್ರಮುಖ ಶಿಷ್ಯರಲ್ಲೊಬ್ಬರಾದ ಕೇದಗಡಿ ಗುಡ್ಡಪ್ಪ ಗೌಡ ಅವರ ಸಂಸ್ಮರಣೆ ಕಾರ್ಯಕ್ರಮ ಗಣ್ಯರ ಉಪಸ್ಥಿತಿಯಲ್ಲಿ ಇತ್ತೀಚೆಗೆ ಜರಗಿತು. ಸ್ಥಳ ಸಾನಿಧ್ಯ ಶ್ರೀ ದೇವರ ವಿಶೇಷ ಪೂಜಾರ್ಚನೆ, ಭಗವದ್ಗೀತಾ ಪಾರಾಯಣದೊಂದಿಗೆ ಸಮರ್ಪಿಸಲಾಯಿತು.
ಬೆಳ್ಳಿಪ್ಪಾಡಿ ಸದಾಶಿವ ರೈ ಸಂಸ್ಮರಣ ಭಾಷಣಗೈದು, ಕೇದಗಡಿ ಗುಡ್ಡಪ್ಪ ಗೌಡರ ಒಡನಾಟವನ್ನು ಸ್ಮರಿಸುತ್ತಾ ,ಅವರ ಅರ್ಥಗಾರಿಕೆಯ ಹೆಚ್ಚುಗಾರಿಕೆಯನ್ನು ತೆರೆದಿಟ್ಟರು.
ನುಡಿನಮನವನ್ನು ಸಲ್ಲಿಸಿ ಮಾತನಾಡಿದ ವೆಂಕಟ್ರಮಣ ಮಾಸ್ತರ್ ಅವರು “ತೆಂಕುತಿಟ್ಟು ಯಕ್ಷಗಾನ ಬಯಲಾಟದಲ್ಲಿ ಒರ್ವ ಅಗ್ರಮಾನ್ಯ ಕಲಾವಿದರಾಗಿ ವಿಜ್ರಂಭಿಸಿದ ಕೇದಗಡಿ ಗುಡ್ಡಪ್ಪ ಗೌಡರ ಕಲಾಕೊಡುಗೆ ಅಪರೂಪವಾದದ್ದು ಎಂದು ನೆನಪಿಸಿದರು. ನಾರಾಯಣ ದೇಲಂಪಾಡಿ ಅವರು “ಕೇದಗಡಿ” ಅವರ ಹೆಸರಿನಲ್ಲಿ ಒಂದು ಪ್ರತಿμÁ್ಠನವನ್ನು ಸ್ಥಾಪಿಸಿ ನಿರಂತರವಾಗಿ ಅವರ ಸಂಸ್ಮರಣೆ ನಡೆಯಬೇಕೆಂದು ಕರೆಯನ್ನಿತ್ತರು.
ಕಲಾ ಸಂಘದ ಅಧ್ಯಕ್ಷ , ಡಾ.ರಮಾನಂದ ಬನಾರಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಗುಡ್ಡಪ್ಪ ಗೌಡರ ನಿರಂತರವಾದ ಅಧ್ಯಯನ ಶೀಲತೆಯ ಕ್ರಮವನ್ನು ಅನಾವರಣಗೊಳಿಸಿದರು. ಭಾಗವತ ಗುರುಗಳಾದ ವಿಶ್ವ ವಿನೋದ ಬನಾರಿ ಅವರು ರಚಿಸಿದ ಕೇದಗಡಿ ಸಂಸ್ಮರಣಾ ಗೀತೆಯನ್ನು ಭಾಗವತ ಮೋಹನ ಮೆನಸಿನಕಾನ ಅವರು ಯಕ್ಷಗಾನ ಶೈಲಿಯಲ್ಲಿ ಪ್ರಸ್ತುತಪಡಿಸಿದರು.
ವೇದಾವತಿ ಕೇದಗಡಿ ಮಾತನಾಡಿದರು. ವಾಮದೇವ ಕೇದಗಡಿ ಪ್ರಾಸ್ತವಿಕವಾಗಿ ಮಾತನಾಡಿ, ಸ್ವಾಗತಿಸಿದರು. ರಾಮಣ್ಣ ಮಾಸ್ತರ್ ನಿರೂಪಿಸಿದರು. ಪುಟಾಣಿಗಳಾದ, ವಿಂದ್ಯಾ ಮನ್ವಿತಾ ಹಾಗೂ ಅಥಿತಿ ಪ್ರಾರ್ಥನಾಗೀತೆಯನ್ನು ಹಾಡಿದರು. .
ಬಳಿಕ ಮೋಹನ ಮೆಣಸಿನಕಾನ, ನಿತೀಶ್ ಕುಮಾರ್ ಎಂಕಣ್ಣಮೂಲೆ, ವಿದ್ಯಾ ಈಶ್ವರಮಂಗಲ ಅವರ ಭಾಗವತಿಕೆಯಲ್ಲಿ, ಶ್ರೀಧರ ಆಚಾರ್ಯ ಈಶ್ವರಮಂಗಲ, ಮಂಡೆಕೂಲು ಅಪ್ಪಯ್ಯ ಮಣಿಯಾಣಿ, ವಿಷ್ಣು ಶರಣ ಬನಾರಿ, ಸದಾನಂದ ಮಯ್ಯಾಳ ಅವರ ಚೆಂಡೆಮದ್ದಳೆ ನಿನಾದದೊಂದಿಗೆ ಕರ್ಣಾವಸಾನ ಯಕ್ಷಗಾನ ತಾಳಮದ್ದಳೆ ನಡೆಯಿತು. ಅರ್ಥಧಾರಿಗಳಾಗಿ ಐತ್ತಪ್ಪ ಗೌಡ ಮುದಿಯಾರು, ಬೆಳ್ಳಿಪ್ಪಾಡಿ ಸದಾಶಿವ ರೈ, ರಮಾನಂದ ರೈ ದೇಲಂಪಾಡಿ, ರಾಮಣ್ಣ ಮಾಸ್ತರ್ ದೇಲಂಪಾಡಿ, ನಾರಾಯಣ ದೇಲಂಪಾಡಿ, ವಾಮದೇವ ಕೇದಗಡಿ, ಬಾಲಕೃಷ್ಣ ಗೌಡ ದೇಲಂಪಾಡಿ, ರಾಮ ನಾಯ್ಕ ದೇಲಂಪಾಡಿ ಭಾಗವಹಿಸಿದ್ದರು. ಗೋಪಾಲಯ್ಯ ಕೋಟಿಗದ್ದೆ, ಶಾಂತಾಕುಮಾರಿ ದೇಲಂಪಾಡಿ, ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ ಮೊದಲಾದವರು ಸಹಕರಿಸಿದರು. ನಂದ ಕಿಶೋರ ಬನಾರಿ ವಂದಿಸಿದರು.




.jpg)
.jpg)
.jpg)

