ಈರೋಡ್ : ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಆನೆಯೊಂದು ರೈತನನ್ನು ತುಳಿದು ಸಾಯಿಸಿದೆ. ಮೃತ ರೈತನನ್ನು ಮಾರನ್(55) ಎಂದು ಗುರುತಿಸಲಾಗಿದೆ.
0
samarasasudhi
ನವೆಂಬರ್ 19, 2024
ಈರೋಡ್ : ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಆನೆಯೊಂದು ರೈತನನ್ನು ತುಳಿದು ಸಾಯಿಸಿದೆ. ಮೃತ ರೈತನನ್ನು ಮಾರನ್(55) ಎಂದು ಗುರುತಿಸಲಾಗಿದೆ.
ಅಕ್ಕಪಕ್ಕದ ರೈತರು ಕಿರುಚಾಟ ಕೇಳಿಸಿಕೊಂಡು ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲಿ ಮಾರನ್ ಮೃತದೇಹ ಸಿಕ್ಕಿದ್ದು, ಅರಣ್ಯ ಅಧಿಕಾರಿಗಳಿಗೆ ಹಾಗೂ ಕಡಂಬೂರು ಠಾಣಾ ಪೊಲೀಸರಿಗೆ ರೈತರು ಮಾಹಿತಿ ನೀಡಿದ್ದಾರೆ.
'ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸತ್ಯಮಂಗಲ ಆಸ್ಪತ್ರೆಗೆ ಕಳುಹಿಸಲಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.