ಕಣ್ಣೂರು : ಕೇರಳದ ಉತ್ತರ ಜಿಲ್ಲೆಯಲ್ಲಿ ವಿದ್ಯಾರ್ಥಿಯೊಬ್ಬನಿಗೆ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟ ಆರೋಪದಡಿ ಮದರಾಸ ಶಿಕ್ಷಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
0
samarasasudhi
ನವೆಂಬರ್ 11, 2024
ಕಣ್ಣೂರು : ಕೇರಳದ ಉತ್ತರ ಜಿಲ್ಲೆಯಲ್ಲಿ ವಿದ್ಯಾರ್ಥಿಯೊಬ್ಬನಿಗೆ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟ ಆರೋಪದಡಿ ಮದರಾಸ ಶಿಕ್ಷಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ನೆರೆಯ ಮಲಪ್ಪುರ ಜಿಲ್ಲೆಯ ತನೂರು ನಿವಾಸಿಯಾಗಿರುವ ಆರೋಪಿ ಉಮೈರ್ ಅಶ್ರಫಿ, ವಿದ್ಯಾರ್ಥಿಯ ಖಾಸಗಿ ಅಂಗಕ್ಕೆ ಮೆಣಸಿನ ಹುಡಿಯನ್ನೂ ಹಾಕಿದ್ದರು ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ವಿದ್ಯಾರ್ಥಿಯು ಪೊಲೀಸರಿಗೆ ದೂರು ನೀಡಿದ ಬಳಿ ಅಶ್ರಫಿ ರಾಜ್ಯದಿಂದ ಪರಾರಿಯಾಗಿ ಕರ್ನಾಟಕ ಮತ್ತು ತಮಿಳುನಾಡಿನ ಹಲವು ಸ್ಥಳಗಳಲ್ಲಿ ತಲೆಮರೆಸಿಕೊಂಡಿದ್ದ.
ತಮಿಳುನಾಡಿನ ಕೊಯಮತ್ತೂರಿನಿಂದ ಅಶ್ರಫಿ ತನ್ನ ಊರಿಗೆ ಮರಳುವ ಬಗ್ಗೆ ಮಾಹಿತಿ ದೊರೆತ ಬಳಿಕ ಪೊಲೀಸ್ ತಂಡವು ಗುರುವಾರ ತನೂರಿಗೆ ತೆರಳಿತ್ತು. ಅಲ್ಲಿಂದಲೂ ಪರಾರಿಯಾಗಲೂ ಯತ್ನಿಸಿದ ಅಶ್ರಫಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ನ್ಯಾಯಾಲಯವು ಶುಕ್ರವಾರ ಅಶ್ರಫಿಗೆ ನ್ಯಾಯಾಂಗ ಬಂಧನ ವಿಧಿಸಿದೆ.