ಚೆನ್ನೈ: ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಅವರು ತಮ್ಮನ್ನು 'ಉಲಗನಾಯಗನ್' ಎಂದು ಕರೆಯದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
0
samarasasudhi
ನವೆಂಬರ್ 11, 2024
ಚೆನ್ನೈ: ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಅವರು ತಮ್ಮನ್ನು 'ಉಲಗನಾಯಗನ್' ಎಂದು ಕರೆಯದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಪಕ್ಷ ಸ್ಥಾಪಕರೂ ಆಗಿರುವ ಕಮಲ್, 'ಅಗಾಧವಾದ ಪ್ರೀತಿಯಿಂದ ನನ್ನನ್ನು 'ಉಲಗನಾಯಗನ್' ಎಂದು ಹಾಗೂ ಇತರ ಅಡ್ಡ ಹೆಸರುಗಳಿಂದ ಕರೆಯಲಾಗುತ್ತದೆ. ಯಾರಿಗೂ ಅಗೌರವ ತೋರದೆ, ಮೇಲಿನ ಎಲ್ಲ ಹೆಸರುಗಳನ್ನು ನಿರಾಕರಿಸುತ್ತಿದ್ದೇನೆ' ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಟರಾದ ಸೂರ್ಯ, ಅಜಿತ್ ಅವರೂ ಈ ಹಿಂದೆ ಇಂತಹದೇ ಮನವಿಯನ್ನು ಮಾಡಿದ್ದರು. ಸೂರಿಯ ಅವರನ್ನು 'ನಡಿಪ್ಪಿನ್ ನಾಯಗನ್' ಎಂತಲೂ, ಅಜಿತ್ ಅವರನ್ನು 'ತಲಾ' ಎಂತಲೂ ಕರೆಯಲಾಗುತ್ತದೆ.