HEALTH TIPS

ನಾಪತ್ತೆಯಾದ ತಹಶೀಲ್ದಾರ್ ಪತ್ತೆ-ಮಾನಸಿಕ ಒತ್ತಡ ಕಾರಣ ಊರು ತೊರೆದಿರುವುದಾಗಿ ಪೋನ್ ಮೂಲಕ ಪತ್ನಿಗೆ ತಿಳಿಸಿದ ತಿರೂರು ಉಪ ತಹಸೀಲ್ದಾರ್

ಮಲಪ್ಪುರಂ: ಹಠಾತ್ ನಾಪತ್ತೆಯಾದ ಮಲಪ್ಪುರಂ ತಿರೂರ್ ಉಪ ತಹಸೀಲ್ದಾರ್ ಪಿ.ಬಿ.ಚಾಲಿಬ್ ತಮ್ಮ ಪತ್ನಿಯನ್ನು ದೂರವಾಣಿಯಲ್ಲಿ ಸಂಪರ್ಕಿಸಿರುವುದಾಗಿ ತಿಳಿದುಬಂದಿದೆ. .

ಚಾಲಿಬ್ ಕರ್ನಾಟಕದಿಂದ ಕರೆ ಮಾಡಿರುವರು. ಕೆಲಸ ಸಂಬಂಧಿ ಮಾನಸಿಕ ತೊಂದರೆಯಿಂದ ಊರು ತೊರೆದಿರುವುದಾಗಿ ತಿಳಿಸಿರುವರೆಂದು ಸಂಬಂಧಿ ಪ್ರದೀಪ್ ತಿಳಿಸಿದ್ದಾರೆ.

ಶೀಘ್ರದಲ್ಲೇ ಮನೆಗೆ ಮರಳುವುದಾಗಿ ಚಾಲಿಬ್ ಹೇಳಿದ್ದು, ಆವರೊಂದಿಗೆ ಬೇರೆ ಯಾರೂ ಇಲ್ಲ ಎಂದು ಸಂಬಂಧಿಕರು ತಿಳಿಸಿದ್ದಾರೆ. ಬುಧವಾರ ಸಂಜೆಯಿಂದ ನಾಪತ್ತೆಯಾಗಿದ್ದಾರೆ. ಕಚೇರಿಯಿಂದ ಕೆಲಸ ಮುಗಿಸಿ ಬರುವುದು ತಡವಾಗುತ್ತದೆ ಎಂದು ಹೇಳಲಾಗಿತ್ತಾದರೂ ಬಳಿಕ ಅವರು  ಕಾಣೆಯಾದಾಗ ಸಂಬಂಧಿಕರು ತಿರೂರ್ ಪೋಲೀಸರಿಗೆ ದೂರು ನೀಡಿದ್ದರು. 

ಬಳಿಕ ಮೊಬೈಲ್ ಟವರ್ ಕೇಂದ್ರೀಕರಿಸಿ ನಡೆಸಿದ ತನಿಖೆಯಲ್ಲಿ ಚಾಲಿಬ್ ಉಡುಪಿ ತಲುಪಿರುವುದು ಗೊತ್ತಾಗಿದೆ. ಎಟಿಎಂನಿಂದ ಹಣ ಡ್ರಾ ಆಗಿರುವುದನ್ನು ಪೋಲೀಸರು ಪತ್ತೆ ಮಾಡಿದ್ದಾರೆ. ಅಷ್ಟರಲ್ಲಿ ಚಾಲಿಬ್ ತನ್ನ ಪತ್ನಿಯನ್ನು ಸಂಪರ್ಕಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries