ಸಮರಸ ಚಿತ್ರಸುದ್ದಿ: ಉಪ್ಪಳ: ಮಂಗಲ್ಪಾಡಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಅರಬಿಕ್ ಕಲೋತ್ಸವದ ಎಲ್.ಪಿ.ವಿಭಾಗದಲ್ಲಿ ದ್ವಿತೀಯ ಸ್ಥಾನ ಹಾಗೂ ಎಲ್.ಪಿ ಜನರಲ್‍ನಲ್ಲಿ ತೃತೀಯ ಸ್ಥಾನವನ್ನು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಅಧ್ಯಾಪಕರು ಹಾಗು ಹೆತ್ತವರೊಂದಿಗೆ ಬಹುಮಾನ ಸ್ವೀಕರಿಸಿದರು.