ಒಟ್ಟಾವಾ: ಹಿಂಸಾಚಾರಕ್ಕೆ ಎಡೆಮಾಡಿಕೊಡುವಂತಹ ಪ್ರತಿಭಟನೆ ನಡೆಯುವ ಸಾಧ್ಯತೆಗಳಿವೆ ಎಂದು ಕೆನಡಾದ ಪೊಲೀಸರು ಎಚ್ಚರಿಕೆ ನೀಡಿದ್ದರಿಂದಾಗಿ ಇಲ್ಲಿನ ಬ್ರಾಂಪ್ಟನ್ ತ್ರಿವೇಣಿ ದೇಗುಲದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ಭಾರತದ ಕಾನ್ಸುಲೇಟ್ ರದ್ದುಪಡಿಸಿದೆ.
0
samarasasudhi
ನವೆಂಬರ್ 13, 2024
ಒಟ್ಟಾವಾ: ಹಿಂಸಾಚಾರಕ್ಕೆ ಎಡೆಮಾಡಿಕೊಡುವಂತಹ ಪ್ರತಿಭಟನೆ ನಡೆಯುವ ಸಾಧ್ಯತೆಗಳಿವೆ ಎಂದು ಕೆನಡಾದ ಪೊಲೀಸರು ಎಚ್ಚರಿಕೆ ನೀಡಿದ್ದರಿಂದಾಗಿ ಇಲ್ಲಿನ ಬ್ರಾಂಪ್ಟನ್ ತ್ರಿವೇಣಿ ದೇಗುಲದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ಭಾರತದ ಕಾನ್ಸುಲೇಟ್ ರದ್ದುಪಡಿಸಿದೆ.
ಪಿಂಚಣಿ ಉದ್ದೇಶಕ್ಕಾಗಿ ಜೀವಿತಾವಧಿ ಪ್ರಮಾಣಪತ್ರ ನೀಡುವ ಶಿಬಿರವನ್ನು ದೇವಸ್ಥಾನದ ಆವರಣದಲ್ಲಿ ನವೆಂಬರ್ 17ರಂದು ಏರ್ಪಡಿಸಲು ಕಾನ್ಸುಲೇಟ್ ನಿರ್ಧರಿಸಿತ್ತು.
ಪೊಲೀಸರ ಎಚ್ಚರಿಕೆ ಕಾರಣದಿಂದಾಗಿ ಕಾರ್ಯಕ್ರಮ ರದ್ದುಪಡಿಸಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರು, ಸಮುದಾಯದ ಜನರ ರಕ್ಷಣೆ, ಹಿತದೃಷ್ಟಿಯಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ದೇಗುಲದ ಆಡಳಿತವು ಹೇಳಿಕೆ ನೀಡಿದೆ.
'ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡುವುದು ಸುರಕ್ಷಿತವಲ್ಲ ಎಂದು ಕೆನಡಿಯನ್ನರು ಭಾವಿಸುತ್ತಾರೆ ಎಂಬುದು ನಮಗೆ ಬೇಸರ ಉಂಟು ಮಾಡಿದೆ' ಎಂದೂ ಆಡಳಿತವು ಹೇಳಿದೆ.