ನವದೆಹಲಿ: ಕೆನಡಾದಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿಯನ್ನು ಖಂಡಿಸಿ, ಹಿಂದೂ- ಸಿಖ್ ಸಂಘಟನೆಗಳ ಕಾರ್ಯಕರ್ತರು ಕೆನಡಿಯನ್ ಹೈ ಕಮಿಷನ್ ಕಚೇರಿ ಬಳಿ ಭಾನುವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು, ಬ್ಯಾರಿಕೇಡ್‌ಗಳ ಮೇಲೆ ಹತ್ತಿದರು.
0
samarasasudhi
ನವೆಂಬರ್ 11, 2024
ನವದೆಹಲಿ: ಕೆನಡಾದಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿಯನ್ನು ಖಂಡಿಸಿ, ಹಿಂದೂ- ಸಿಖ್ ಸಂಘಟನೆಗಳ ಕಾರ್ಯಕರ್ತರು ಕೆನಡಿಯನ್ ಹೈ ಕಮಿಷನ್ ಕಚೇರಿ ಬಳಿ ಭಾನುವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು, ಬ್ಯಾರಿಕೇಡ್‌ಗಳ ಮೇಲೆ ಹತ್ತಿದರು.
ಪ್ರತಿಭಟನೆಯಿಂದಾಗಿ, ಕೆನಡಿಯನ್ ಹೈ ಕಮಿಷನ್ ಕಚೇರಿಯ ಬಳಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿತ್ತು.
'ಹಿಂದೂ- ಸಿಖ್ ಜಾಗತಿಕ ವೇದಿಕೆ'ಯ ಸದಸ್ಯರು ಇಲ್ಲಿನ ಚಾಣಕ್ಯಪುರಿಯಲ್ಲಿರುವ 'ಕೆನಡಿಯನ್ ಹೈ ಕಮಿಷನ್' ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕಾನೂನು ಸುವ್ಯವಸ್ಥೆ ಕಾಪಾಡಲು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಆದರೂ, ಕೆಲವು ಕಾರ್ಯಕರ್ತರು ಬ್ಯಾರಿಕೇಡ್‌ಗಳ ಮೇಲೆ ಹತ್ತಿ ಒಳನುಗ್ಗಲು ಪ್ರಯತ್ನಿಸಿದರು.
ಕೆನಡಾದಲ್ಲಿ ಹಿಂದೂ ದೇವಾಲಯಗಳ ಮೇಲೆ ಹಲವು ದಾಳಿಗಳು ನಡೆದಿದ್ದು, ಬ್ರಾಂಪ್ಟನ್‌ನಲ್ಲಿರುವ 'ಹಿಂದೂ ಸಭಾ ಮಂದಿರ'ದ ಬಳಿ ನವೆಂಬರ್ 4ರಂದು ಘರ್ಷಣೆ ನಡೆದಿತ್ತು.
ಹಿಂದೂ- ಸಿಖ್ ಸಂಘಟನೆಗಳು ದೆಹಲಿಯಲ್ಲಿರುವ 'ಕೆನಡಿಯನ್ ಹೈ ಕಮಿಷನ್' ಕಚೇರಿ ಬಳಿ ಭಾನುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು -ಪಿಟಿಐ ಚಿತ್ರ