ತಿರುವನಂತಪುರಂ/ಕುಂಬಳೆ: ದಕ್ಷಿಣ ಭಾರತದ ಭಾಷೆಗಳ ಪ್ಯೆಕಿ ಕನ್ನಡ ಭಾಷೆ, ಸಂಸ್ಕøತಿಗೆ ಮಹತ್ತರ ಸ್ಥಾನವಿದೆ. ಭಾಷಾ ವ್ಯೆರುಧ್ಯಗಳಿಲ್ಲದೆ ಎಲ್ಲರನ್ನೂ ಸ್ವೀಕರಿಸುವ, ಬೆಂಬಲಿಸುವ ಮನೋಭಾವ ನಮ್ಮಲ್ಲಿರಬೇಕು.ತನ್ಮೂಲಕ ನೆಮ್ಮದಿಯ ಸಮಾಜ ನಿರ್ಮಾಣ ಸಾಧ್ಯ ಎಂದು ಕೇರಳ ಸರ್ಕಾರದ ಬಂದರು, ಪುರಾತತ್ವ ಇಲಾಖೆ ಸಚಿವ ಕಡನ್ನಪ್ಪಳ್ಳಿ ರಾಮಚಂದ್ರನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರ, ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ಕೇರಳ ಗಡಿನಾಡ ಘಟಕ ಕಾಸರಗೋಡು, ಭಾರತ ಭವನ, ತಿರುವನಂತಪುರಂ ಕೇರಳ ಸರ್ಕಾರ ಇವುಗಳ ಸಂಯುಕ್ತ ಆಶ್ರಯದಲ್ಲಿ ತಿರುವನಂತಪುರದ ಭಾರತ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ಅನಂತಪುರಿ ಗಡಿ ಕನ್ನಡ ಸಂಸ್ಕೃತಿ ಉತ್ಸವ 2024 ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಚಿವರು ಮಾತನಾಡಿದರು.
ಕಾಸರಗೋಡು ಹಾಗೂ ತಮ್ಮ ಸಂಬಂಧಗಳ ಬಗ್ಗೆ ನೆನಪಿಸಿಕೊಂಡ ಸಚಿವರು,ಗಡಿ ತಾಲೂಕು ಮಂಜೇಶ್ವರದ ಭಾಷಾ ವೈವಿಧ್ಯ, ಸ್ನೇಹಪ್ರಿಯ ಜನರ ವಿವಿಧ ಕ್ಷೇತ್ರಗಳ ಸಾಧಕ ಜೀವನದ ಬಗ್ಗೆ ನೆನಪಿಸಿದರು.ತುಳು ಭಾಷೆ-ಸಂಸ್ಕøತಿಯ ಗಾಢ ಪ್ರಭಾವ ತನ್ನನ್ನು ಕುತೂಹಲಿಗನಾಗಿಸಿತ್ತು ಎಂದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ವಿಶ್ರಾಂತ ಕುಲಪತಿ, ಕರ್ನಾಟಕ ಜಾನಪದ ಪರಿಷತ್ತು ಕೇಂದ್ರ ಘಟಕದ ಅಧ್ಯಕ್ಷ ಹಿ.ಚಿ.ಬೋರಲಿಂಗಯ್ಯ ಅವರು, ಒಳನಾಡಿಗಿಂತ ಗಡಿನಾಡು-ಹೊರನಾಡಿನ ಕನ್ನಡಿಗರಲ್ಲಿ ಭಾμÉ, ಸಂಸ್ಕೃತಿಯ ಬಗ್ಗೆ ಹೆಚ್ಚು ಒಲವು ಸಹಜವಾಗಿ ಕಂಡುಬರುತ್ತದೆ. ಪ್ರಾಚೀನ ಕನ್ನಡ ಭಾಷೆ-ಪರಂಪರೆಯ ಗಾಢ ಪ್ರಭಾವ ದ್ರಾವಿಡ ಭಾಷೆಗಳಲ್ಲಿ ಕಂಡುಬರುತ್ತದೆ. ಇಲ್ಲಿಯ ಶಾಸನ, ತಾಳೆಯೋಲೆಗಳು ಕನ್ನಡದ ಸುಧೀರ್ಘ ಪರಂಪರೆಯನ್ನು ಸಾರಿ ಹೇಳುತ್ತದೆ. ಆನಸಾಮಾನ್ಯರು ಇವುಗಳ ಬಗ್ಗೆ ಜಾಗೃತರಾಗಿರಬೇಕಾದರೆ ನೆಮ್ಮದಿ, ತೃಪ್ತ ಸಮಾಜ ನಿರ್ಮಾಣವಾಗಬೇಕು. ಆರೋಗ್ಯಪೂರ್ಣ ಸಮಾಜಕ್ಕೆ ಶುದ್ದ ಪರಿಸರ, ಮರಗಿಡಗಳು, ಪ್ರಾಕೃತಿಕ ಸಂಪನ್ಮೂಲ ಸಮೃದ್ಧವಾಗಿರಬೇಕು ಎಂದವರು ಕರೆನೀಡಿದರು.
ಗಡಿನಾಡು ಸಾಹಿತ್ಯ-ಸಾಂಸ್ಕøತಿಕ ಅಕಾಡೆಮಿ ಸಂಸ್ಥಾಪಕ ಎಸ್. ಪ್ರದೀಪ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಗಡಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಭಾರತ್ ಭವನ್ ಸದಸ್ಯ ಕಾರ್ಯದರ್ಶಿ ಪ್ರಮೋದ್ ಪಯ್ಯನ್ನೂರ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಕರ್ನಾಟಕ ಸರ್ಕಾರದ ಭೂನ್ಯಾಯ ಮಂಡಳಿ ಸದಸ್ಯ ಗಿರೀಶ್ ಶೆಟ್ಟಿ ಎಂ., ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ತಿರುವನಂತಪುರದ ಮಾಧ್ವ ಮಹಿಳಾ ಮಂಡಳಿ ಅಧ್ಯಕ್ಷೆ ಡಾ.ರುಕ್ಕಿಣಿ.ಕೆ, ತಿರುವನಂತಪುರ ಕರ್ನಾಟಕ ಸಂಘದ ಕಾರ್ಯದರ್ಶಿ ಡಾ. ಅನಿತ ಕುಮಾರಿ ಹೆಗಡೆ, ಕಾಸರಗೋಡಿನ ಕನ್ನಡ ಭವನ ಸಂಸ್ಥಾಪಕ ವಾಮನ ರಾವ್ ಬೇಕಲ, ಕೇರಳ ಲೋಕಸೇವಾ ಆಯೋಗದ ನಿವೃತ್ತ ಅಧೀನ ಕಾರ್ಯದರ್ಶಿ ಗಣೇಶ್ ಪ್ರಸಾದ್ ಪಾ£ಣೂರು, ಸಮಾಜ ಸೇವಕ ಹರಿನಾರಾಯಣ ಸಿರಂತಡ್ಕ, ತಿರುವನಂತಪುರ ಮಾಧ್ವ ಬ್ರಾಹ್ಮಣ ಸಮಾಜದ ಜೊತೆ ಕಾರ್ಯದರ್ಶಿ ಸೂರ್ಯನಾರಾಯಣ ಕುಂಜುರಾಯ, ಪ್ರೊ.ಎ.ಶ್ರೀನಾಥ್ ಕಾಸರಗೋಡು ಮುಖ್ಯ ಅತಿಥಿಗಳಾಗಿ ಗಡಿನಾಡ ಸಾಹಿತ್ಯ-ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ ಸ್ವಾಗತಿಸಿ, ಕಾರ್ಯದರ್ಶಿ ಅಖಿಲೇಶ್ ನಗುಮುಗಂ ವಂದಿಸಿದರು. ರವಿ ನಾಯ್ಕಾಪು ನಿರೂಪಿಸಿದರು. ಈ ಸಂದರ್ಭ ವಿವಿಧ ವಲಯಗಳ ಸಾಧಕರಾದ ರೆ.ಫಾ.ಬಾಸಿಲ್ ವಾಸ್, ಪ್ರೊ.ಸ್ಟೀಫನ್ ಕ್ವೊಡ್ರೋಸ್, ಶ್ರೀಜಿತ್ ಶ್ರೀಧರ್, ಡಾ.ರತ್ನಾಕರ ಮಲ್ಲಮೂಲೆ, ಡಾ.ಶಕೀರಲಿ ಕೆ.ಎ., ಪತ್ರಕರ್ತ ಗಂಗಾಧರ ತೆಕ್ಕೇಮೂಲೆ, ಅಸ್ಲಂ ಕುಂಜತ್ತೂರು ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಬಳಿಕ ದ್ವಾದಶಭಾಷಾ ಕವಿಗೋಷ್ಠಿ ರಾಜಶ್ರೀ ಟಿ.ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪರಿಣಿತ ರವಿ ಎಡನಾಡು ಅವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಿತು. ಸಂಜೆ ಕರ್ನಾಟಕ ಜಾನಪದ ಪರಿಷತ್ತು ಕೇಂದ್ರ ಘಟಕದ ಅಧ್ಯಕ್ಷ ಹಿ.ಚಿ.ಬೋರಲಿಂಗಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪದಲ್ಲಿ ಕೇರಳ ಆಹಾರ, ನಾಗರಿಕ ಪೂರೈಕೆ ಸಚಿವ ಜಿ.ಆರ್.ಅನಿಲ್ ಸಾಧಕ ಪುರಸ್ಕಾರ ಪ್ರದಾನಗೈದರು. ಕರ್ನಾಟಕ ಗಡಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ ಜೆ.ಎಸ್. ಸದಸ್ಯೆ ಆಯಿಷಾ ಎ.ಎ.ಎ.ಪೆರ್ಲ ಸಹಿತ ವಿವಿಧ ವಲಯಗಳ ಗಣ್ಯರು ಭಾಗವಹಿಸಿದ್ದರು.
ಈ ಸಂದಭರ್À ಮಿತ್ರ ಬಳಗ ಬೆಳ್ಳೂರು ಸಹಿತ ವಿವಿಧ ತಂಡಗಳಿಂದ ಸಾಂಸ್ಕøತಿಕ ವೈವಿಧ್ಯ ನಡೆಯಿತು. ಸಚಿವರುಗಳಿಗೆ ಗಡಿನಾಡ ಜನರ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಲಾಯಿತು.




.jpg)
.jpg)

