ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರ ಸುದ್ದಿಗೋಷ್ಠಿಯ ವರದಿ ಮಾಡಿದ್ದಕ್ಕೆ ಆಸ್ಟ್ರೇಲಿಯಾದ ಮಾಧ್ಯಮದ ಮೇಲೆ ಕೆನಡಾ ನಿರ್ಬಂಧ ಹೇರಿದೆ ಎಂದು ಭಾರತ ಗುರುವಾರ ದೂರಿದೆ.
0
samarasasudhi
ನವೆಂಬರ್ 08, 2024
ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರ ಸುದ್ದಿಗೋಷ್ಠಿಯ ವರದಿ ಮಾಡಿದ್ದಕ್ಕೆ ಆಸ್ಟ್ರೇಲಿಯಾದ ಮಾಧ್ಯಮದ ಮೇಲೆ ಕೆನಡಾ ನಿರ್ಬಂಧ ಹೇರಿದೆ ಎಂದು ಭಾರತ ಗುರುವಾರ ದೂರಿದೆ.
ಜೈಶಂಕರ್ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಅವರ ಜಂಟಿ ಸುದ್ದಿಗೋಷ್ಠಿಯ ಸುದ್ದಿಯನ್ನು 'ಆಸ್ಟ್ರೇಲಿಯಾ ಟುಡೇ' ತನ್ನ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮದ ಖಾತೆಗಳಲ್ಲಿ ಪ್ರಕಟಿಸಿತ್ತು.
'ಆಸ್ಟ್ರೇಲಿಯಾ ಟುಡೆ ಮಾಧ್ಯಮದ ಸಾಮಾಜಿಕ ಖಾತೆಗಳು ಮತ್ತು ವೆಬ್‌ಸೈಟ್‌ಅನ್ನು ನಿರ್ಬಂಧಿಸಲಾಗಿದ್ದು, ಕೆನಡಾದಲ್ಲಿ ವೀಕ್ಷಣೆಗೆ ಲಭ್ಯವಿಲ್ಲ. ಜೈಶಂಕರ್ ಮತ್ತು ವಾಂಗ್ ಅವರ ಸುದ್ದಿಗೋಷ್ಠಿಯ ವರದಿ ಪ್ರಕಟಿಸಿದ ಕೆಲವೇ ಗಂಟೆಗಳ ಒಳಗೆ ಈ ನಿರ್ಬಂಧ ಹೇರಲಾಗಿದೆ. ಇದು ವಾಕ್ ಸ್ವಾತಂತ್ರ್ಯದ ವಿಷಯದಲ್ಲಿ ಕೆನಡಾ ಸರ್ಕಾರದ ಆಷಾಢಭೂತಿತನವನ್ನು ತೋರಿಸುತ್ತದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಟೀಕಿಸಿದ್ದಾರೆ.