HEALTH TIPS

ಕನ್ನಡ ಭವನದ ವಾಮನ್ ರಾವ್ ಬೇಕಲ್ ದಂಪತಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

 ಕಾಸರಗೋಡು: ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಸಾರ್ವಜನಿಕ ವಾಚನಾಲಯಗಳ ರೂವಾರಿ ವಾಮನ್ ರಾವ್ ಬೇಕಲ್ -ಸಂಧ್ಯಾರಾಣಿ ಟೀಚರ್ ದಂಪತಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಮೈಸೂರಿನಲ್ಲಿ ಜರುಗಿತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೈಸೂರು, ಸುಜ್ಞಾನ ವಿದ್ಯಾಪೀಠ ಹಾಗೂ ಸಾಹಿತ್ಯ ಸಾಂಸ್ಕøತಿಕ ರಂಗ ಸಾಧಕರ ಶ್ರೀಮಾತಾ ಪ್ರಕಾಶನ (ರಿ.)ವಿಜಯನಗರ ಬಳ್ಳಾರಿ ಸಂಯುಕ್ತಾಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಸುವರ್ಣ ಸಂಭ್ರಮ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.  ಆದರ್ಶ ಕನ್ನಡ ದಂಪತಿಗಳು ಶೀರ್ಷಿಕೆಯಲ್ಲಿ ಗಡಿನಾಡಿನ ಸಾಧಕರಿಗೆ ಸಲ್ಲುವ "ಕನ್ನಡ ರಾಜ್ಯೋತ್ಸವ ಪ್ರಶಸ್ತಿ "ನೀಡಿ ಪುರಸ್ಕರಿಸಲಾಗಿದೆ.  ಮೈಸೂರಿನ ಜಿಲ್ಲಾ ಸಾಹಿತ್ಯ ಭವನದ ನಾಲ್ವಡಿ ಕೃಷ್ಣರಾಜ ಸಭಾ ಅಂಗಣದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಡಾ ಅವದೂತ ಮಹರ್ಷಿ ಸಿದ್ದಾರ್ಥ ಸ್ವಾಮೀಜಿ ಪ್ರಶಸ್ತಿ ಸಮಾರಂಭ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ನೆರವೇರಿಸಿದರು.  ಸುಜ್ಞಾನ ವಿದ್ಯಾಪೀಠದ ಡಾ ನಾಗರಾಜ್ ತಂಬ್ರಲ್ಲಿ, ಕ. ಸಾ. ಪ. ಮೈಸೂರು ಉಪಾಧ್ಯಕ್ಷ ಡಾ ಟಿ ತ್ಯಾಗರಾಜು ಮೈಸೂರು, ಡಾ ಪ್ರವೀಣ್ ರಾಜ್ ಎಸ್ ರಾವ್, ಲಯನ್ ಟಿ ಸುರೇಶ್ ಗೋಲ್ಡ್, ಡಾ ವೈ. ವೈ. ಕೊಕ್ಕನವರ, ಡಾ. ಎ. ಡಿ. ಕೊಟ್ನಾಳ್, ಸುಮಾ ಬಸವರಾಜ್ ಹಡಪದ, ಡಾ ರಾಜು ಮೋರೆ, ಗೋವಿಂದ ಕಾಡಪ್ಪ ಮೇಲಗೇರಿ, ಡಾ ದೊಡ್ಡಪ್ಪ ಪೂಜಾರಿ ಹುಂಡೇಕಲ್ ಮೊದಲಾದವರು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries