ಪೆರ್ಲ : ಪೆರ್ಲ ಕೃಷ್ಣ ಭಟ್ ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ ಖ್ಯಾತ ಅರ್ಥಧಾರಿ, ಪೆರ್ಲ ಕೃಷ್ಣ ಭಟ್ ಅವರ ಜನ್ಮಶತಮಾನೋತ್ಸವ'ಪೆರ್ಲ ನೂರರ ನೆನಪು'ಕಾರ್ಯಕ್ರಮ ಡಿ.21ರಂದು ಮಧ್ಯಾಹ್ನ 2ಗಂಟೆಗೆ ಪೆರ್ಲದ ಶ್ರೀ ಭಾರತೀ ಸದನದಲ್ಲಿ ಜರುಗಲಿದೆ. ಕಾರ್ಯಕ್ರಮದ ಅಂಗವಾಗಿ 'ಕೃಷ್ಣ ಸಂಧಾನ'ಯಕ್ಷಗಾನ ತಾಳಮದ್ದಳೆ, ಸಭಾ ಕಾರ್ಯಕ್ರಮ ನಡೆಯುವುದು.
ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು. ಕರ್ನಾಟಕ ಸರ್ಕಾರದ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷ ಡಾ. ಟಿ.ಶ್ಯಾಮ ಭಟ್ ಐಎಎಸ್ ಅಧ್ಯಕ್ಷತೆ ವಹಿಸುವರು. ಈ ಸಂದರ್ಭ ಖ್ಯಾತ ಯಕ್ಷಗಾನ ಅರ್ಥಧಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಅವರಿಗೆ ಪೆರ್ಲಪ್ರಶಸ್ತಿ ಪ್ರದಾನ ಮಾಡಲಾಗುವುದು. ಆರೆಸ್ಸೆಸ್‍ನ ಅಖಿಲಭಾರತ ಕುಟುಂಬ ಪ್ರಬೋಧಕ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಸಂಸ್ಮರಣಾ ಭಾಷಣ ಮಾಡುವರು. ಡಾ. ಪ್ರಭಾಕರ ಜೋಷಿ ಹಾಗೂ ಕೃಷ್ಣ ಪ್ರಸಾದ್ ಅಡ್ಯಂತಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.




