ಬದಿಯಡ್ಕ: ನೀರ್ಚಾಲು ಶ್ರೀಕುಮಾರಸ್ವಾಮಿ ಭಜನಾ ಸಂಘದ 50ನೇ ವಾರ್ಷಿಕೋತ್ಸವ ಇಂದು(ಬುಧವಾರ) ವಿವಿಧ ಕಾರ್ಯಕ್ರಮಗಳೊಂದಿಗೆ ನೀರ್ಚಾಲು ಕುಮಾರಸ್ವಾಮಿ ಭಜನಾ ಮಂದಿರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 6.30ಕ್ಕೆ ಗಣಪತಿ ಹವನ, ಧ್ವಜಾರೋಹಣ, ಆಶ್ಲೇಷ ಪೂಜಾರಂಭ, 9 ರಿಂದ 10.30ರ ವರೆಗೆ ಕುಮಾರಸ್ವಾಮಿ ಮಹಿಳಾ ಭಜನಾ ಸಂಘದವರಿಂದ ಭಜನೆ, 10.30 ರಿಂದ 12ರ ವರೆಗೆ ನೀರ್ಚಾಲು ಶ್ರೀಧರ್ಮಶಾಸ್ತಾ ಮಹಿಳಾ ಭಜನಾ ತಂಡದವರಿಂದ ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ, 2 ರಿಂದ 3.15ರ ವರೆಗೆ ಪರಿವಾರಸಮೇತ ಶ್ರೀಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಮಾವಿನಕಟ್ಟೆ, 3.15 ರಿಂದ 4.30ರ ವರೆಗೆ ನೆಕ್ರಾಜೆ ಶ್ರೀದುರ್ಗಾ ಮಹಿಳಾ ಭಜನಾ ತಂಡ, 4.30ರಿಂದ 6ರ ವರೆಗೆ ಕಾರ್ಮಾರು ಶ್ರೀಮಹಾವಿಷ್ಣು ಭಜನಾ ತಂಡದವರಿಂದ ಭಜನೆ, 6.3ಕ್ಕೆ ದೀಪ ಪ್ರತಿಷ್ಠೆ, ಶ್ರೀಕುಮಾರ ಸ್ವಾಮಿ ಭಜನಾ ತಂಡದವರಿಂದ ಭಜನೆ,6.30ರಿಂದ 7.15ರ ವರೆಗೆ ಓಂಕಾರ ಬಾಲಗೋಕುಲ ರತ್ನಗಿರಿ ತಂಡ, 7.45 ರಿಂದ ರಾತ್ರಿ 9ರ ವರೆಗೆ ನೀರ್ಚಾಲು ಶ್ರೀಧರ್ಮಶಾಸ್ತ ಭಜನಾ ತಂಡದವರಿಂದ ಭಜನೆ, 9ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾನ ಭೋಜನ ನಡೆಯಲಿದೆ. ರಾತ್ರಿ 9.30ರಿಂದ ಥಂಡರ್ ಗ್ರೈಸ್ ಫೌಂಡೇಶನ್ ಬಜ್ಪೆ ತಂಡದವರಿಂದ ಕ್ಷೇತ್ರ ಪುರಾಣ ಮಂಜರಿ ವಿಶೇಷ ಪ್ರದರ್ಶನ ನಡೆಯಲಿದೆ.


