ಶಿವಗಿರಿ: ಇಂದಿನಿಂದ ಶಿವಗಿರಿ ಮಹಾಯಾತ್ರೆ ಆರಂಭವಾಗಲಿದೆ. ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಏಳು ದಿನಗಳ ಶೋಕಾಚರಣೆಯನ್ನು ಘೋಷಿಸಿರುವುದರಿಂದ ಉದ್ಘಾಟಿಸಲಿದ್ದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಭಾಗವಹಿಸುವುದಿಲ್ಲ. ಬದಲಿಗೆ ಸಚಿವ ಎಂ.ಬಿ. ರಾಜೇಶ್ ಯಾತ್ರೆಯನ್ನು ಉದ್ಘಾಟಿಸುವರು.
ಟ್ರಸ್ಟ್ ಅಧ್ಯಕ್ಷ ಸಚ್ಚಿದಾನಂದ ಸ್ವಾಮಿ ಅಧ್ಯಕ್ಷತೆ ವಹಿಸುವರು. ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಸ್ವಾಮಿ ಶುಭಾಂಗಾನಂದ ಅವರು ಆಶೀರ್ವಚನ ನೀಡಲಿದ್ದಾರೆ. ಸಂಸದ ಅಡೂರ್ ಪ್ರಕಾಶ್, ಮಾಜಿ ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಶಾಸಕ ಅಡ್ವ. ವಿ. ಸಂತೋಷ್, ವರ್ಕಳ ನಗರಸಭೆ ಅಧ್ಯಕ್ಷ ಕೆ. ಎಂ. ಲಾಜಿ, ಮಾಜಿ ಕೇಂದ್ರ ಸಚಿವ ವಿ. ಮುರಳೀಧರನ್, ಯಾತ್ರಾ ಸಮಿತಿ ಅಧ್ಯಕ್ಷ ಕೆ. ಮುರಳೀಧರನ್, ಧರ್ಮಸಂಘಂ ಟ್ರಸ್ಟ್ ಸಲಹಾ ಸಮಿತಿ ಸದಸ್ಯ ಕೆ.ಜಿ. ಬಾಬುರಾಜನ್ ಮತ್ತಿತರರು ಭಾಗವಹಿಸಲಿದ್ದಾರೆ. ಯಾತ್ರಾ ಸಮಿತಿ ಕಾರ್ಯದರ್ಶಿ ಸ್ವಾಮಿ ಋತಂಬರಾನಂದ ಸ್ವಾಗತ ಭಾಷಣ ಮಾಡಲಿದ್ದು, ಧರ್ಮಸಂಘದ ಟ್ರಸ್ಟ್ ಖಜಾಂಚಿ ಸ್ವಾಮಿ ಶಾರದಾನಂದ ವಂದಿಸಿರುವರು. ಗುರುಧರ್ಮ ಪ್ರಚಾರ ಸಭಾದ ಕಾರ್ಯದರ್ಶಿ ಸ್ವಾಮಿ ಅಸಂಗಾನಂದಗಿರಿ ಗುರುಸ್ಮರಣೆ ನಡೆಸುವರು.
11:30ಕ್ಕೆ ಶಿಕ್ಷಣ ಸಮ್ಮೇಳನವನ್ನು ಸಾರ್ವಜನಿಕ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಉದ್ಘಾಟಿಸುವರು. ಆಹಾರ ಸಚಿವ ಜಿ. ಆರ್. ಅನಿಲ್ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ನಾರಾಯಣ ಗುರುಕುಲದ ಅಧ್ಯಕ್ಷ ಸ್ವಾಮಿ ಮುನಿನಾರಾಯಣ ಪ್ರಸಾದ್ ಅವರನ್ನು ಸನ್ಮಾನಿಸಲಾಗುವುದು. ಶ್ರೀ ನಾರಾಯಣಗುರು ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ವಿ.ಪಿ. ಜಗತಿರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಎಸ್‍ಎನ್‍ಡಿಪಿ ಸಭೆಯ ಅಧ್ಯಕ್ಷ ಡಾ. ಎಂ.ಎನ್. ಸೋಮನ್, ಶಾಸಕ ಮಾನ್ಸ್ ಜೋಸೆಫ್, ಎ.ಡಿ.ಜಿ.ಪಿ. ಪಿ.ವಿಜಯನ್ ಪ್ರಧಾನ ಭಾಷಣ ಮಾಡಲಿದ್ದಾರೆ. ಚಲನಚಿತ್ರ ನಿರ್ದೇಶಕ ವೇಣು ಕುನ್ನಪ್ಪಿಳ್ಳಿ, ಮನೋರಮಾ ಸಂಪಾದಕೀಯ ನಿರ್ದೇಶಕ ಜೋಸ್ ಪಣಚಿಪುರಂ, ಬಿ.ಜೆ.ಪಿ. ಮಾಜಿ ರಾಜ್ಯಾಧ್ಯಕ್ಷ ಸಿ. ಕೆ. ಪದ್ಮನಾಭನ್, ಯುಎಇ ಸೇವಾ ಸಂಯೋಜಕ ಅಂಬಲತ್ತರ ರಾಜನ್, ಅಡ್ವ. ಜಿ.ಸುಬೋಧನ್ ಶಾರ್ಜಾ ಜಿಡಿಪಿಎಸ್ ಅಧ್ಯಕ್ಷ ರಾಮಕೃಷ್ಣನ್, ರಾಜ್ಯ ಲೈಬ್ರರಿ ಕೌನ್ಸಿಲ್ ಉಪಾಧ್ಯಕ್ಷ ಎ. ಪಿ. ಜಯನ್, ಡಾ. ಅಜಯನ ಪಣಯೇರ ಮಾತನಾಡಲಿದ್ದಾರೆ. ಧರ್ಮ ಸಂಗಮ ವಿಶ್ವಸ್ಥ ಮಂಡಳಿ ಸದಸ್ಯ ಸ್ವಾಮಿ ವಿಶಾಲಾನಂದ ಸ್ವಾಗತ ಭಾಷಣ ಮಾಡಲಿದ್ದು, ಸ್ವಾಮಿ ಸತ್ಯಾನಂದ ತೀರ್ಥರು ವಂದಿಸುವರು.
ಅಪರಾಹ್ನ 2 ಗಂಟೆಗೆ ನಡೆಯುವ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನದಲ್ಲಿ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಉದ್ಘಾಟಿಸುವರು. ಅಂತರಶಿಕ್ಷಣ ವಿಜ್ಞಾನ ಮತ್ತು ತಂತ್ರಜ್ಞಾನ ರಾಷ್ಟ್ರೀಯ ಸಂಸ್ಥೆಯ ನಿರ್ದೇಶಕ ಡಾ. ಅನಂತರಾಮಕೃಷ್ಣನ್ ಅಧ್ಯಕ್ಷತೆ ವಹಿಸುವರು. ಐಐಎಸ್.ಟಿ ಡೀನ್ ಡಾ. ಕುರುವಿಲ ಜೋಸೆಫ್, ಕೇರಳ ವಿಶ್ವವಿದ್ಯಾಲಯದ ಬಯೋಇನ್‍ಫಮ್ರ್ಯಾಟಿಕ್ಸ್ ವಿಭಾಗದ ಮಾಜಿ ಮುಖ್ಯಸ್ಥ ಪ್ರೊ.. ಡಾ. ಅಚ್ಯುತ ಶಂಕರ್ ಎಸ್.ನಾಯರ್, ಸಿಡಾಕ್ ಸಹ ನಿರ್ದೇಶಕ ಡಾ. ಕೆಬಿ ಸೆಂತಿಲ್ ಕುಮಾರ ಮತ್ತು ಬೈಜು ಪಾಲಕಲ್ ಮಾತನಾಡುವರು. ಅದ್ವೈತ ಆಶ್ರಮದ ಕಾರ್ಯದರ್ಶಿ ಸಾಮಿ ಧರ್ಮ ಚೈತನ್ಯ ಸ್ವಾಗತಿಸಿ, ಶ್ರೀ ನಾರಾಯಣಗುರು ವಿಜ್ಞಾನಕೋಶದ ಸಂಪಾದಕ ಮಂಗಾಡ್ ಬಾಲಚಂದ್ರನ್ ವಂದಿಸಿವರು.
ಸಂಜೆ 5 ಗಂಟೆಗೆ ಮಾಜಿ ಸಚಿವ ಕಡನ್ನಪ್ಪಳ್ಳಿ ಸುರೇಂದ್ರನ್. ಅಧ್ಯಕ್ಷತೆ ವಹಿಸುವರು. ಶಿವಗಿರಿ ವೈದ್ಯಕೀಯ ಮಿಷನ್ ನಿರ್ದೇಶಕ ಡಾ. ಎಸ್. ಕೆ. ನಿಶಾದ್ ಅವರನ್ನು ಸನ್ಮಾನಿಸಲಾಗುವುದು. ಪದ್ಮಶ್ರೀ ಡಾ. ಮಾರ್ತಾಂಡಪಿಳ್ಳೆ ಡಿಜಿಟಲ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಸಿಸಾಥೋಮಸ್, ಪ್ರೊ. ಡಾ. ಚಂದ್ರದಾಸ್ ನಾರಾಯಣ, ಡಾ. ಹರಿಕೃಷ್ಣನ್, ಮಾಜಿ ಡಿಜಿಪಿ ಋಷಿರಾಜ್ ಸಿಂಗ್ ವಿವಿಧ ವಿಷಯಗಳನ್ನು ಮಂಡಿಸಲಿದ್ದಾರೆ. ಆರೋಗ್ಯ ವಿವಿ ಕುಲಸಚಿವ ಗೋಪಕುಮಾರ್, ಡಾ. ಲಾಲ್, ಡಾ. ಕೆ. ಸುಧಾಕರನ್ ಭಾಷಣ ಮಾಡಲಿದ್ದಾರೆ. ಸ್ವಾಮಿ ಸಂದ್ರಾನಂದ ಸ್ವಾಗತಿಸಿ, ಸ್ವಾಮಿ ಪ್ರಬೋಧತೀರ್ಥ ವಂದಿಸುವರು.





