HEALTH TIPS

ಐತ್ತ ಮಾನ್ಯ ಅವರಿಗೆ ಕರ್ಷಕ ರತ್ನ ರಾಷ್ಟ್ರೀಯ ಪುರಸ್ಕಾರ

ಬದಿಯಡ್ಕ : ಪ್ರಗತಿಪರ, ಪ್ರಯೋಗಶೀಲ ಕೃಷಿಕ ಐತ್ತ ಮಾನ್ಯ ಅವರು ಕರ್ಷಕ ರತ್ನ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಡಿ.15ರಂದು ನವದೆಹಲಿಯಲ್ಲಿ ನಡೆದ ಬಹುಜನ ಸಾಹಿತ್ಯ ಅಕಾಡೆಮಿಯ 17ನೇ ರಾಷ್ಟ್ರೀಯ ಸಮಾವೇಶದಲ್ಲಿ ಪುರಸ್ಕಾರ ಸ್ವೀಕರಿಸಿದರು.


ಐತ್ತ ಮಾನ್ಯ ಅವರು ಕೆನರಾ ಬ್ಯಾಂಕಿನಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ಹಿರಿಯ ಪ್ರಬಂಧಕರಾಗಿ ನಿವೃತ್ತರಾದವರು. ಕೃಷಿ ಕಾರ್ಮಿಕ  ಕುಟುಂಬದಿಂದ ಬಂದ ಅವರ ಸಾಧನೆಗೆ ಕೇರಳ ರಾಜ್ಯ ಪ್ರಶಸ್ತಿ, ಸ್ಥಳೀಯಾಡಳಿತ ಸಂಸ್ಥೆಗಳಿಂದ ಆದರ್ಶ ಕೃಷಿಕ ಪ್ರಶಸ್ತಿ ಲಭಿಸಿದೆ. ಮಾನ್ಯದಲ್ಲಿ ಬಂಜರು ಭೂಮಿಯನ್ನು ಕೃಷಿ ಯೋಗ್ಯವಾಗಿಸಿ ತೆಂಗು, ಕಂಗು, ಬತ್ತಕೃಷಿ, ಹೈನುಗಾರಿಕೆಯನ್ನು ಲಾಭದಾಯಕವಾಗಿಸಿದ್ದಾರೆ. ಅವರ ಕೃಷಿ ಕಾಯಕಕ್ಕೆ ಧರ್ಮಪತ್ನಿ, ಜನಮೆಚ್ಚಿದ ಶಿಕ್ಷಕಿ ಲಲಿತಾ ಉಳಿಯ ಬೆಂಬಲ ನೀಡುತ್ತಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries