HEALTH TIPS

ಫಟಾಫಟ್‌ ವಿಡಿಯೋ ಎಡಿಟ್ ಮಾಡಬೇಕೆ? ಹಾಗಿದ್ರೆ, ಈ ಉಚಿತ ಟೂಲ್ ಬಳಸಿ!

 ಪ್ರಸ್ತುತ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ವಿಡಿಯೋ ಅಪ್‌ಲೋಡ್‌ ಹೆಚ್ಚಿನ ಕ್ರೇಜ್‌ ಪಡೆದಿದ್ದು, ಹೀಗಾಗಿ ವಿಡಿಯೋ ಎಡಿಟಿಂಗ್ ಬಳಕೆದಾರರಿಗೆ ಪ್ರಮುಖ ಅಂಶವಾಗಿದೆ. ಇಂದಿನ ದಿನಗಳಲ್ಲಿ ವಿಡಿಯೋ ಅನ್ನು ತ್ವರಿತವಾಗಿ ಎಡಿಟ್ ಮಾಡಲು ಸಾಕಷ್ಟು ಅಪ್ಲಿಕೇಶನ್‌ಗಳು ಲಭ್ಯ ಇವೆ. ಅದಾಗ್ಯೂ, ಕೆಲವು ಸುಲಭ ವಿಧಾನಗಳಿಂದ ಹೆಚ್ಚು ಬಳಕೆಯಲ್ಲಿ ಇವೆ.

ಹೌದು, ಸೆರೆ ಹಿಡಿದಿರುವ ವಿಡಿಯೋ ಅಂದವಾಗಿ ಕಾಣುವಂತೆ ಮಾಡಲು ವಿಡಿಯೋ ಎಡಿಟಿಂಗ್ ಅಗತ್ಯ. ಸದ್ಯ ವಿಡಿಯೋ ಎಡಿಟಿಂಗ್ ಸುಲಭ ಹಾಗೂ ಸರಳ ಆಗಿದೆ. ಏಕೆಂದರೆ ಆನ್‌ಲೈನ್ ಆಪ್‌ ಮತ್ತು ವೆಬ್‌ಸೈಟ್‌ಗಳು ಮೂಲಕ ಎಡಿಟಿಂಗ್ ಸರಳ ಎನಿಸಿದೆ. ಬಳಕೆದಾರರಿಗೆ ತ್ವರಿತ ಹಾಗೂ ಸುಲಭ ಆಗುವ ರೀತಿಯಲ್ಲಿ ಅಪ್ಲಿಕೇಶನ್‌ಗಳು ಲಭ್ಯ ಇವೆ. ಹಾಗಾದರೆ ಕೆಲವು ಅತ್ಯುತ್ತಮ ಆನ್‌ಲೈನ್‌ ವಿಡಿಯೋ ಎಡಿಟಿಂಗ್‌ ಆಪ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವೆವ್ ವಿಡಿಯೋ (Wave.video)
ಈ Wave.video ಆನ್‌ಲೈನ್ ಎಡಿಟಿಂಗ್ ಒಂದು ವೆಬ್‌ಸೈಟ್ ಆಗಿದ್ದು, ಇದರಲ್ಲಿ ವೀಡಿಯೊ ಕ್ಲಿಕ್‌ಗಳನ್ನು ಕ್ರಿಯೆಟ್‌ ಮಾಡಬಹುದು, ಎಡಿಟ್‌ ಮಾಡಬಹುದು, ಶೇರ್‌ ಮಾಡಬಹುದು ಅಲ್ಲದೇ ಹೋಸ್ಟ್‌ ಮಾಡಬಹುದು. ಈ ಸೈಟ್‌ ವಿಶಾಲವಾದ ವಿಡಿಯೋ ಟೆಂಪ್ಲೇಟ್ ಲೈಬ್ರರಿ ಅನ್ನು ಹೊಂದಿದ್ದು, ಲೋಗೋ, ಫಾಂಟ್‌ ವಾಟರ್‌ ಮಾರ್ಕ್‌ ಸೆಟ್ ಮಾಡಬಹುದು. ಸುಮಾರು 30 ಕ್ಕೂ ಅಧಿಕ ಫಾರ್ಮ್ಯಾಟ್‌ಗಳಲ್ಲಿ ಶೇರ್ ಮಾಡುವ ಆಯ್ಕೆ ಕೂಡಾ ಇದೆ. ಅಂದಹಾಗೆ ಈ ಎಡಿಟಿಂಗ್ ವೆಬ್‌ಸೈಟ್ ಉಚಿತವಾಗಿ ಬಳಸಬಹುದು.

ವಿವಾ ಕಟ್‌ (VivaCut)
VivaCut ಇದೊಂದು ವಿಡಿಯೋ ಎಡಿಟಿಂಗ್ ಆಂಡ್ರಾಯ್ಡ್ ಆಪ್‌ ಆಗಿದ್ದು, ಮಲ್ಟಿ ಸ್ಕ್ರೀನ್ ಟೈಮ್‌ಲೈನ್, ಕ್ರೋಮಾ ಕೀ ಮತ್ತು ಗ್ರೀನ್‌ ಸ್ಕ್ರೀನ್‌ ಸೌಲಭ್ಯಗಳನ್ನು ಪಡೆದಿದೆ. ಆಡಿಯೋ ಜೊತೆಗೆ ವಿಡಿಯೋ ಸಂಯೋಜನೆ ಮಾಡಬಹುದಾದ ಆಯ್ಕೆಗಳನ್ನು ಇದು ಒಳಗೊಂಡಿದೆ. ಹಾಗೆಯೇ ವಿಡಿಯೋ ಕೋಲಾಜ್‌, ಮಾಸ್ಕ್‌, ಟೆಕ್ಸ್ಟ್‌ ಸೇರಿದಂತೆ ಇನ್ನಷ್ಟು ಆಯ್ಕೆಗಳು ಲಭ್ಯ ಇವೆ. ಎಡಿಟ್ ಮಾಡಿದ ವಿಡಿಯೋಗಳನ್ನು 720p, 1080p ಮತ್ತು 4K ಗುಣಮಟ್ಟದೊಂದಿಗೆ ಶೇರ್ ಮಾಡುವ ಆಯ್ಕೆಗಳು ಕೂಡಾ ಇವೆ.

ಫ್ಲೆಕ್ಸ್‌ಕ್ಲಿಪ್‌ (Flexclip)
ಫ್ಲೆಕ್ಸ್‌ಕ್ಲಿಪ್‌ - Flexclip ಕೂಡಾ ಉಚಿತ ಆನ್‌ಲೈನ್ ವಿಡಿಯೋ ಎಡಿಟಿಂಗ್ ಆಪ್‌ ಆಗಿದ್ದು, ಜನಪ್ರಿಯ ಬಹುತೇಕ ಎಲ್ಲಾ ಫೀಚರ್ಸ್‌ಗಳನ್ನು ಇದು ಹೊಂದಿದೆ. ಈ ತಾಣವು ಅತ್ಯುತ್ತಮ ಸ್ಟಾಕ್ ವೀಡಿಯೊ ಸಂಗ್ರಹವನ್ನು ಒಳಗೊಂಡಿದ್ದು, ಇದರ ಆಪ್‌ನ ಉಚಿತ ಆವೃತ್ತಿಯಲ್ಲಿ, ಬಳಕೆದಾರರು 480p ವಿಡಿಯೋ ರಚಿಸಲು ಅವಕಾಶ ಇದೆ. ಮುಖ್ಯವಾಗಿ ಇನ್‌ಸ್ಟಾಗ್ರಾಮ್‌, ಯೂಟ್ಯೂಬ್‌ ಶಾರ್ಟ್‌ ನಂತಹ ತಾಣಗಳಿಗೆ ಶೇರ್ ಮಾಡಲು ವಿಡಿಯೋ ಎಡಿಟ್ ಮಾಡಬಹುದು.

ಕ್ಯಾನ್ವಾ (Canva)
ಕ್ಯಾನ್ವಾ ಕೂಡಾ ಅತ್ಯುತ್ತಮ ವಿಡಿಯೋ ಎಡಿಟಿಂಗ್ ಸೈಟ್‌ಗಳಲ್ಲಿ ಒಂದಾಗಿದೆ. ಇದರಲ್ಲಿ ಫೋಟೋ ಮತ್ತು ಗ್ರಾಫಿಕ್ ಡಿಸೈನಿಂಗ್ ಹೊಂದಿದೆ. ಇದರ ಜೊತೆಗೆ ಕ್ಯಾನ್ವಾ ಉಚಿತ ಆನ್‌ಲೈನ್ ವೀಡಿಯೊ ಎಡಿಟಿಂಗ್ ಸೇವೆಯನ್ನು ಕೂಡಾ ಒಳಗೊಂಡಿದೆ. ಬಳಕೆದಾರರು ಉಚಿತವಾಗಿ ವಿಡಿಯೋ ಕ್ಲಿಕ್‌ಗಳನ್ನು ಎಡಿಟ್‌ ಮಾಡಲು ಹಾಗೂ ರಚಿಸಲು ಇದು ಅನುವು ಮಾಡಿಕೊಡುತ್ತದೆ. ಈ ತಾಣವು 1000s ಗ್ರಾಹಕೀಯಗೊಳಿಸಬಹುದಾದ ಸ್ಟಾಕ್ ವಿಡಿಯೋಗಳನ್ನು ಮತ್ತು ಡ್ರಾಪ್‌ನಂತಹ ಆಯ್ಕೆಗಳನ್ನು ಹೊಂದಿದೆ.

ಇನ್‌ ವಿಡಿಯೋ (InVideo)
ಇನ್‌ ವಿಡಿಯೋ ಪ್ಲಾಟ್‌ಫಾರ್ಮ್‌ ಸಹ ಆನ್‌ಲೈನ್ ಎಡಿಟಿಂಗ್ ಟೂಲ್ ಆಗಿದ್ದು, ಅದು ಬಳಕೆದಾರರ ವೀಡಿಯೊ ಕ್ಲಿಪ್‌ಗಳನ್ನು ಕಸ್ಟಮೈಸ್ ಮಾಡಲು ಅನುವು ಮಾಡಿಕೊಡುತ್ತದೆ. ಈ ತಾಣವು ಉಚಿತ ಟೆಂಪ್ಲೇಟ್ ಆಯ್ಕೆಗಳನ್ನು ಪಡೆದಿದ್ದು, ಈ ಸೈಟ್‌ನಿಂದ ಫೇಸ್‌ಬುಕ್, ಟ್ವಿಟರ್ ಮತ್ತು ಯೂಟ್ಯೂಬ್‌ ಪ್ಲಾಟ್‌ಫಾರ್ಮ್ ಗಳಿಗೆ ನೇರವಾಗಿ ವಿಡಿಯೋ ಶೇರ್ ಕೂಡಾ ಮಾಡಬಹುದಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries