ನವದೆಹಲಿ: ದೇಶದ ಹಲವು ನಗರಗಳಲ್ಲಿ ಏರ್‌ಟೆಲ್ ಬಳಕೆದಾರರು ಗುರುವಾರ ನೆಟ್‌ವರ್ಕ್ ಸಮಸ್ಯೆ ಎದುರಿಸಿದರು ಎಂದು ಡೌನ್‌ಡಿಟೆಕ್ಟರ್ ಡಾಟ್ ಕಾಂ ತಿಳಿಸಿದೆ.
ದೆಹಲಿ, ಅಹಮದಾಬಾದ್, ಜೈಪುರ, ಸೂರತ್, ಹೈದರಾಬಾದ್, ಮುಂಬೈನಲ್ಲಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ನೆಟ್‌ವರ್ಕ್ ದೋಷದ ದೂರುಗಳು ಕೇಳಿಬಂದಿದ್ದವು ಎಂದು ಡೌನ್‌ಡಿಟೆಕ್ಟರ್ ಹೇಳಿದೆ.
ಏರ್‌ಟೆಲ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಹಮದಾಬಾದ್‌ನಲ್ಲಿ ಮಾತ್ರ ನೆಟ್‌ವರ್ಕ್ ಸಮಸ್ಯೆ ಕಾಣಿಸಿಕೊಂಡಿದ್ದು, ಬೆಳಿಗ್ಗೆ 30 ನಿಮಿಷ ಸೇವೆಯಲ್ಲಿ ವ್ಯತ್ಯಯವಾಗಿತ್ತು ಎಂದು ಕಂಪನಿ ಮೂಲಗಳು ತಿಳಿಸಿವೆ.

