ಉಪ್ಪಳ: ಜೋಡುಕಲ್ಲು ಸಮೀಪದ ಕಯ್ಯಾರು ಸೊಂದಿ ಶ್ರೀವಿಷ್ಣುಮೂರ್ತಿದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಪೆÇಯ್ಯಕಂಡ ರವಿರಾಜ್ ಕಡಮಣ್ಣಾಯ ಅವರ ಉಪಸ್ಥಿತಿ ಹಾಗೂ ಆಶೀರ್ವಾದದೊಂದಿಗೆ ಕೊಡುಗೈದಾನಿ, ಉದ್ಯಮಿ, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಬಿ.ವಸಂತ ಪೈ ಬದಿಯಡ್ಕ ಅವರು ಇತ್ತೀಚೆಗೆ ಬಿಡುಗಡೆಗೊಳಿಸಿ ಶುಭಹಾರೈಸಿದರು.
ಸಮಾರಂಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಜಯರಾಮ ಸಾಂತ ಸಣ್ಣತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಕೃಷ್ಣಪ್ಪ ಪೂಜಾರಿ ದೇರಂಬಳ, ಅಧ್ಯಕ್ಷ ಡಾ.ಎಂ.ಶ್ರೀಧರ ಭಟ್ ಉಪ್ಪಳ, ಕೋಶಾಧ್ಯಕ್ಷ ಎಂ.ಕೆ. ಅಶೋಕ್ ಕುಮಾರ್ ಹೊಳ್ಳ, ಶ್ರೀಕ್ಷೇತ್ರದ ಪವಿತ್ರಪಾಣಿ ಪ್ರಭಾಕರ ಹೊಳ್ಳ ಮುಂತಾದವರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಶೆಟ್ಟಿ ಕಯ್ಯಾರು ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಸುರೇಶ್ ಶೆಟ್ಟಿ ಜೋಡುಕಲ್ಲು ವಂದಿಸಿದರು. ಭಕ್ತಜನರು ಅಪಾರ ಞಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

.jpg)
.jpg)

